ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ: ಭಾರತದಲ್ಲಿ ಎಷ್ಟು ದಿನ? ಇತರ ದೇಶಗಳಲ್ಲಿ ಎಷ್ಟು?

  • 16 Apr 2026 07:00:38 PM

ಮೊಣಕಾಲು ಬದಲಾವಣೆ (Knee Replacement) ಶಸ್ತ್ರಚಿಕಿತ್ಸೆಗೆ ವಿವಿಧ ದೇಶಗಳಲ್ಲಿ ಕಾಯುವ ಅವಧಿಯಲ್ಲಿ ದೊಡ್ಡ ವ್ಯತ್ಯಾಸವಿದೆ ಎಂದು ವರದಿ ತಿಳಿಸಿದೆ. ಭಾರತ ಮತ್ತು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಈ ಚಿಕಿತ್ಸೆ ಬಹಳ ವೇಗವಾಗಿ ನಡೆಯುತ್ತದೆ.

 

ದೇಶವಾರು ಕಾಯುವ ಸರಾಸರಿ ದಿನಗಳಲ್ಲಿ ಪೋಲ್ಯಾಂಡ್ – 253 ದಿನಗಳು, ಆಸ್ಟ್ರೇಲಿಯಾ – 209 ದಿನಗಳು, ಸ್ಪೇನ್ – 147 ದಿನಗಳು, ಕೆನಡಾ – 122 ದಿನಗಳು, ಯುನೈಟೆಡ್ ಕಿಂಗ್‌ಡಮ್ – 98 ದಿನಗಳು ಈ ರೀತಿ ಓಎಸಿಡ್ ವರದಿಯಲ್ಲಿ ತಿಳಿಸಲಾಗಿದೆ. ಈ ಅಂಕಿಅಂಶಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಶಸ್ತ್ರಚಿಕಿತ್ಸೆಗೆ ಕಾಯುವ ಸರಾಸರಿ ಸಮಯವನ್ನು ತೋರಿಸುತ್ತವೆ.

 

ಇನ್ನೊಂದೆಡೆ, ಭಾರತದಲ್ಲಿ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯವಾಗಿ 3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಗೆ ಮುನ್ನ ಎಷ್ಟು ದಿನ ಕಾಯಬೇಕು ಎಂಬುದು ಆಸ್ಪತ್ರೆ ಹಾಗೂ ನಗರಾವಾರು ಬದಲಾಗಬಹುದು.

 

ಏಕೆ ಈಷ್ಟು ವ್ಯತ್ಯಾಸ?

ತಜ್ಞರ ಪ್ರಕಾರ ಕಾಯುವ ಅವಧಿ ಕೆಳಗಿನ ಕಾರಣಗಳಿಂದ ಬದಲಾಗುತ್ತದೆ:

• ಆರೋಗ್ಯ ಕ್ಷೇತ್ರದ ಮೂಲಸೌಕರ್ಯ

• ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಲಭ್ಯತೆ

• ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ

• ರೋಗಿಗಳ ಸಂಖ್ಯೆಯ ಹೆಚ್ಚಳ

 

ವಿಕಸಿತ ದೇಶಗಳಲ್ಲಿಯೂ ಸಹ ಮೊಣಕಾಲು ಶಸ್ತ್ರಚಿಕಿತ್ಸೆಗೆ ಹಲವು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಈ ಅಂಕಿಅಂಶಗಳು ಪ್ರತಿ ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತವೆ.