ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಇರುವ ಇ-ಚಲನ್ ದಂಡ ಪಾವತಿಸಲು ವಾಹನ ಸವಾರರಿಗೆ ಮಂಗಳೂರು ನಗರ ಪೊಲೀಸರು ವಿಶೇಷ ಅವಕಾಶ ಕಲ್ಪಿಸಿದ್ದಾರೆ.
ಮೇ 2026ರೊಳಗೆ ದಾಖಲಾಗಿರುವ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್‌ಗಳ ಮೇಲೆ ಶೇ.50 ರಷ್ಟು ದಂಡ ರಿಯಾಯಿತಿ ನೀಡಲಾಗಿದೆ. ಈ ವಿಶೇಷ ಸೌಲಭ್ಯವು ಜೂನ್ 21ರಿಂದ ಜುಲೈ 10, 2026ರವರೆಗೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.
ಬಾಕಿ ಇರುವ ದಂಡಗಳನ್ನು ಕಡಿಮೆ ಮೊತ್ತದಲ್ಲಿ ಪಾವತಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದ್ದು, ವಾಹನ ಸವಾರರು ಈ ಅವಧಿಯೊಳಗೆ ತಮ್ಮ ಇ-ಚಲನ್‌ಗಳನ್ನು ತೆರವುಗೊಳಿಸಿ ದಾಖಲೆಗಳನ್ನು ನಿಯಮಾನುಸಾರ ಸರಿಪಡಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.





