Vi ಗ್ರಾಹಕರಿಗೆ ಉಚಿತ Spotify Premium ಸೌಲಭ್ಯ; 3 ತಿಂಗಳವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಟೆಲಿಕಾಂ ಸೇವಾ ಸಂಸ್ಥೆ Vi ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಹೊಸ ಆಫರ್ ಅನ್ನು ಪರಿಚಯಿಸಿದೆ. ಜಾಗತಿಕ ಆಡಿಯೋ ಸ್ಟ್ರೀಮಿಂಗ್ ವೇದಿಕೆ Spotify ಜೊತೆ ಕೈಜೋಡಿಸಿರುವ ಕಂಪನಿ, ಅರ್ಹ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ Spotify Premium ಸೇವೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಈ ಸೌಲಭ್ಯ ಇಂದಿನಿಂದಲೇ ಜಾರಿಗೆ ಬಂದಿದ್ದು, ಹೊಸದಾಗಿ ಸಂಪರ್ಕ ಪಡೆಯುವ ಹಾಗೂ ಅರ್ಹ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಮುಂದುವರಿಸುವ ಗ್ರಾಹಕರು ತಮ್ಮ ಸಂಪರ್ಕ ಸಕ್ರಿಯಗೊಂಡ ತಕ್ಷಣವೇ ಮೂರು ತಿಂಗಳ ಉಚಿತ Spotify Premium ಸದಸ್ಯತ್ವವನ್ನು ಪಡೆಯಬಹುದು.
ಈ ವಿಶೇಷ ಆಫರ್ ಅಡಿಯಲ್ಲಿ ಬಳಕೆದಾರರಿಗೆ Spotify Premiumನ ಹಲವು ಜನಪ್ರಿಯ ವೈಶಿಷ್ಟ್ಯಗಳು ಲಭ್ಯವಾಗಲಿವೆ. ಜಾಹೀರಾತುಗಳ ಅಡಚಣೆಯಿಲ್ಲದೆ 10 ಕೋಟಿಗೂ ಹೆಚ್ಚು ಹಾಡುಗಳನ್ನು ನಿರಂತರವಾಗಿ ಆಲಿಸಬಹುದು. ಇದರ ಜೊತೆಗೆ, ಹಾಡುಗಳು, ಪ್ಲೇಲಿಸ್ಟ್‌ಗಳು, ಆಲ್ಬಮ್‌ಗಳು ಹಾಗೂ 70 ಲಕ್ಷಕ್ಕೂ ಹೆಚ್ಚು ಪಾಡ್‌ಕಾಸ್ಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಇಂಟರ್ನೆಟ್ ಸಂಪರ್ಕವಿಲ್ಲದ ಸಮಯದಲ್ಲೂ ಕೇಳುವ ಅವಕಾಶ ಸಿಗಲಿದೆ.
ಬಳಕೆದಾರರು ತಮ್ಮ ಇಷ್ಟದ ಹಾಡುಗಳನ್ನು ಯಾವುದೇ ಸಾಧನದಲ್ಲಿ ನೇರವಾಗಿ ಪ್ಲೇ ಮಾಡಬಹುದಲ್ಲದೆ, ಅನಿಯಮಿತ ಸ್ಕಿಪ್ ಆಯ್ಕೆಯನ್ನು ಬಳಸಬಹುದು. ಜೊತೆಗೆ ಮ್ಯೂಸಿಕ್ ಕ್ಯೂ ಅನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ, Spotify Premium ಮೂಲಕ 320 Kbps ವರೆಗಿನ ಉನ್ನತ ಗುಣಮಟ್ಟದ ಆಡಿಯೋ ಸ್ಟ್ರೀಮಿಂಗ್ ಲಭ್ಯವಾಗಲಿದ್ದು, ಸಂಗೀತಾಸಕ್ತರಿಗೆ ಹೆಚ್ಚು ಸ್ಪಷ್ಟ ಮತ್ತು ಉತ್ತಮ ಧ್ವನಿ ಅನುಭವ ದೊರೆಯಲಿದೆ.





