03 July 2026 |

ಅಮೆಜಾನ್ ಪ್ರೈಮ್ ಡೇ 2026: ಜುಲೈ 4ರಿಂದ 72 ಗಂಟೆಗಳ ಮೆಗಾ ಸೇಲ್; ಸಾವಿರಾರು ಉತ್ಪನ್ನಗಳಿಗೆ ಭಾರಿ ರಿಯಾಯಿತಿ

  • 02 Jul 2026 12:08:20 PM

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ಸಿಹಿ ಸುದ್ದಿ ನೀಡಿದೆ. ಅಮೆಜಾನ್ ಪ್ರೈಮ್ ಡೇ 2026 ವಿಶೇಷ ಸೇಲ್ ಜುಲೈ 4ರಿಂದ ಜುಲೈ 6ರವರೆಗೆ ಒಟ್ಟು 72 ಗಂಟೆಗಳ ಕಾಲ ನಡೆಯಲಿದೆ. ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿರುವ ಈ ಸೇಲ್‌ನಲ್ಲಿ 300ಕ್ಕೂ ಹೆಚ್ಚು ಬ್ರಾಂಡ್‌ಗಳ 15,000ಕ್ಕೂ ಅಧಿಕ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ.

 

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಟಿವಿ, ಆಡಿಯೋ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳ ಉತ್ಪನ್ನಗಳ ಮೇಲೆ ಭಾರಿ ಡಿಸ್ಕೌಂಟ್ ದೊರೆಯಲಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಶೇ.10ರವರೆಗೆ ತಕ್ಷಣದ ರಿಯಾಯಿತಿಯೂ ಲಭ್ಯವಿದೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರೈಮ್ ಸದಸ್ಯರಿಗೆ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಸೌಲಭ್ಯವೂ ಇದೆ.

 

ಈ ಸಂದರ್ಭದಲ್ಲಿ ಅಮೆಜಾನ್ ತನ್ನ ಪ್ರೈಮ್ ಸದಸ್ಯತ್ವ ಯೋಜನೆಗಳ ಮೇಲೂ ವಿಶೇಷ ಆಫರ್ ನೀಡಿದ್ದು, ವಾರ್ಷಿಕ ಸದಸ್ಯತ್ವ ಸೇರಿದಂತೆ ವಿವಿಧ ಪ್ಲಾನ್‌ಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು.

 

ಪ್ರೈಮ್ ಡೇ ಸೇಲ್‌ನಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್, ಆಪಲ್ ಸೇರಿದಂತೆ ಹಲವು ಪ್ರಮುಖ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.