07 July 2026 |

ಕರ್ನಾಟಕದ ಅತಿ ಎತ್ತರದ ಕಟ್ಟಡಗಳು ಬೆಂಗಳೂರಲ್ಲ… ಮಂಗಳೂರಲ್ಲಿವೆ! ಇಲ್ಲಿದೆ ಟಾಪ್-5 ಪಟ್ಟಿ

  • 07 Jul 2026 12:44:52 AM

ಕರ್ನಾಟಕದಲ್ಲಿ ಅತಿ ಎತ್ತರದ ಕಟ್ಟಡಗಳು ಎಂದರೆ ಬಹುತೇಕರಿಗೆ ಮೊದಲು ನೆನಪಾಗುವುದು ಬೆಂಗಳೂರು. ಆದರೆ ನಿಮಗೆ ಆಶ್ಚರ್ಯವಾಗಬಹುದು – ರಾಜ್ಯದ ಅತಿ ಎತ್ತರದ ಐದು ಕಟ್ಟಡಗಳ ಪಟ್ಟಿಯಲ್ಲಿ ಮಂಗಳೂರೇ ಮೇಲುಗೈ ಸಾಧಿಸಿದೆ.

 

ಇತ್ತೀಚಿನ ಲಭ್ಯ ಮಾಹಿತಿಯ ಪ್ರಕಾರ, ಕರ್ನಾಟಕದ ಅತಿ ಎತ್ತರದ ಐದು ಕಟ್ಟಡಗಳೂ ಮಂಗಳೂರಿನಲ್ಲಿವೆ. ಕಳೆದ ಕೆಲವು ವರ್ಷಗಳಲ್ಲಿ ಮಂಗಳೂರಿನಲ್ಲಿ ಎತ್ತರದ ವಸತಿ ಗೋಪುರಗಳ ನಿರ್ಮಾಣ ವೇಗವಾಗಿ ನಡೆಯುತ್ತಿದ್ದು, ನಗರದ ಸ್ಕೈಲೈನ್ ಹೊಸ ರೂಪ ಪಡೆದುಕೊಳ್ಳುತ್ತಿದೆ.

 

ಇಗೋ ಕರ್ನಾಟಕದ ಅತಿ ಎತ್ತರದ 5 ಕಟ್ಟಡಗಳ ಪಟ್ಟಿ.

5. ಐದನೇ ಸ್ಥಾನದಲ್ಲಿ: NorthernSky Excelsa

ಸ್ಥಳ: ನಂತೂರು, ಮಂಗಳೂರು, ಮಹಡಿಗಳು: 40, ಎತ್ತರ: 130 ಮೀಟರ್. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಈ ಕಟ್ಟದ ಮಂಗಳೂರಿನ ಪ್ರಮುಖ ಹೈರೈಸ್ ಯೋಜನೆಗಳಲ್ಲಿ ಒಂದಾಗಿದೆ.

*****

4. ನಾಲ್ಕನೇ ಸ್ಥಾನದಲ್ಲಿ: Planet SKS

ಸ್ಥಳ: ಕದ್ರಿ, ಮಂಗಳೂರು, ಮಹಡಿಗಳು: 40, ಎತ್ತರ: 135 ಮೀಟರ್. ಪೂರ್ಣಗೊಂಡಿರುವ ಈ ಕಟ್ಟಡವು ಮಂಗಳೂರಿನ ಸ್ಕೈಲೈನ್‌ಗೆ ವಿಶೇಷ ಗುರುತು ನೀಡಿದೆ.

****

3. ಮೂರನೇ ಸ್ಥಾನದಲ್ಲಿ: Land Trades Altura

ಸ್ಥಳ: ಬೆಂದೂರುವೆಲ್, ಮಂಗಳೂರು, ಮಹಡಿಗಳು: 37, ಎತ್ತರ: 140 ಮೀಟರ್. ಮಂಗಳೂರಿನ ಅತ್ಯಂತ ಎತ್ತರದ ಪೂರ್ಣಗೊಂಡ ವಸತಿ ಗೋಪುರಗಳಲ್ಲಿ ಇದೂ ಒಂದು.

*****

2. ಎರಡನೇ ಸ್ಥಾನದಲ್ಲಿ: Land Trades Shivabagh


ಸ್ಥಳ: ಕದ್ರಿ, ಮಂಗಳೂರು, ಮಹಡಿಗಳು: 39, ಎತ್ತರ: 145 ಮೀಟರ್. ನಿರ್ಮಾಣ ಹಂತದಲ್ಲಿರುವ ಈ ಯೋಜನೆ ಮಂಗಳೂರಿನ ಎತ್ತರದ ಕಟ್ಟಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

*****

ಒಂದನೇ ಸ್ಥಾನದಲ್ಲಿ: Westline Signature

ಸ್ಥಳ: ನಂತೂರು, ಮಂಗಳೂರು, ಮಹಡಿಗಳು: 55, ಎತ್ತರ: 165.1 ಮೀಟರ್. ಲಭ್ಯ ಮಾಹಿತಿಯ ಪ್ರಕಾರ, ಇದು ಕರ್ನಾಟಕದ ಅತಿ ಎತ್ತರದ ಕಟ್ಟಡವಾಗಿದೆ. ಈ ಗೋಪುರ ಇನ್ನೂ ನಿರ್ಮಾಣ ಹಂತದಲ್ಲಿದೆ.

 

ಮಂಗಳೂರು ನಗರದಲ್ಲಿ ಒಂದರ ಹಿಂದೆ ಒಂದರಂತೆ ಎತ್ತರದ ವಸತಿ ಗೋಪುರಗಳು ನಿರ್ಮಾಣವಾಗುತ್ತಿದ್ದು, ನಗರದ ಸ್ಕೈಲೈನ್ ವೇಗವಾಗಿ ಬದಲಾಗುತ್ತಿದೆ. ಇದೇ ವೇಳೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿಯೂ ಹಲವು ಹೊಸ ಹೈರೈಸ್ ಯೋಜನೆಗಳು ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಬದಲಾವಣೆ ಕಾಣುವ ಸಾಧ್ಯತೆ ಇದೆ.