08 July 2026 |

Fact Check | ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಿದೆಯೇ? ವೈರಲ್ ಸುದ್ದಿಯ ಹಿಂದಿನ ನಿಜಾಂಶವೇನು?

  • 07 Jul 2026 06:26:14 PM

ಸಾಮಾಜಿಕ ಜಾಲತಾಣಗಳಲ್ಲಿ “ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲಾಗಿದೆ” ಎಂಬ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲವರು ವಿಮಾನ ನಿಲ್ದಾಣವೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಮಾಹಿತಿ ಸಂಪೂರ್ಣವಾಗಿ ಸತ್ಯವಲ್ಲ.

 

ಏನು ನಿಜ?
ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ (Shivamogga Airport) ಮುಚ್ಚಿಲ್ಲ. ವಿಮಾನ ನಿಲ್ದಾಣವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ನಿರ್ವಹಣೆಯಲ್ಲಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿಯೇ ಇದೆ.

 

ಹಾಗಾದರೆ ಗೊಂದಲ ಏಕೆ?
ಪ್ರಸ್ತುತ ವಾಣಿಜ್ಯ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಇಂಡಿಗೋ (IndiGo) ಸಂಸ್ಥೆ ಈಗಾಗಲೇ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಸ್ಪೈಸ್‌ಜೆಟ್(SpiceJet) ಕೂಡ 2026ರ ಜೂನ್ 9ರಿಂದ ಚೆನ್ನೈ–ಶಿವಮೊಗ್ಗ–ಹೈದರಾಬಾದ್ ಮಾರ್ಗದ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಈ ಕಾರಣದಿಂದ ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಯಾವುದೇ ನಿಗದಿತ ವಾಣಿಜ್ಯ ವಿಮಾನಗಳು ಸಂಚರಿಸುತ್ತಿಲ್ಲ.

 

ಇದು ಶಾಶ್ವತವೇ?
ಇಲ್ಲ. ವಿಮಾನ ನಿಲ್ದಾಣ ಅಧಿಕಾರಿಗಳ ಮಾಹಿತಿಯಂತೆ, ಈ ಸ್ಥಗಿತವು ತಾತ್ಕಾಲಿಕವಾಗಿದ್ದು, ಕಾರ್ಯಾಚರಣೆ ಮತ್ತು ವಾಣಿಜ್ಯ ಕಾರಣಗಳಿಂದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ವಿಮಾನ ಸೇವೆಗಳು ಆರಂಭವಾಗುವ ನಿರೀಕ್ಷೆಯಿದೆ.

 

ಶಿವಮೊಗ್ಗ ವಿಮಾನ ನಿಲ್ದಾಣದ ಶಿವಮೊಗ್ಗದ ಸೊಗಣೆ ಎಂಬಲ್ಲಿ ನಗರದಿಂದ ಸುಮಾರು 8.8 ಕಿ.ಮೀ. ಅಂತರದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ UDAN (ಉಡಾನ್) ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು ವಿಮಾನದ ಒಟ್ಟು ನಿರ್ಮಾಣ ವೆಚ್ಚ ಸುಮಾರು ₹450 ಕೋಟಿಯಷ್ಟಾಗಿತ್ತು.

 

ದಾವೆ: ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚಲಾಗಿದೆ.
ನಿಜಾಂಶ: ವಿಮಾನ ನಿಲ್ದಾಣ ಮುಚ್ಚಿಲ್ಲ. ಸದ್ಯಕ್ಕೆ ವಾಣಿಜ್ಯ ವಿಮಾನ ಸೇವೆಗಳು ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.