ತ್ವರಿತ ಮಾಹಿತಿ
* ಜಾರಿ: ಜುಲೈ 22, 2026
* ಹೊಸ ಸೇವಾ ನಿರ್ವಹಣೆ: Al Hind Tours & Travels (ICAC)
* ಮೊದಲು Passport Seva Portalನಲ್ಲಿ ಅರ್ಜಿ
* ಬಳಿಕ consularsevainuae.com ಮೂಲಕ ಅಪಾಯಿಂಟ್‌ಮೆಂಟ್
* ಹೊಸ ಸ್ಲಾಟ್‌ಗಳು: ಬೆಳಿಗ್ಗೆ 9 ಮತ್ತು ರಾತ್ರಿ 9 ಗಂಟೆಗೆ
* ಯುಎಇಯಲ್ಲಿ 16 ICAC ಕೇಂದ್ರಗಳು
* ಸೇವಾ ಸಮಯ: ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ
ಅಬುಧಾಬಿ/ದುಬೈ: ಯುಎಇಯಲ್ಲಿ ಭಾರತೀಯ ಪಾಸ್‌ಪೋರ್ಟ್, ವೀಸಾ, ಕಾನ್ಸುಲರ್ ಹಾಗೂ ಅಟೆಸ್ಟೇಶನ್ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಇನ್ನು ಮುಂದೆ ಭಾರತೀಯ ರಾಯಭಾರ ಕಚೇರಿ (ಅಬುಧಾಬಿ) ಅಥವಾ ಭಾರತೀಯ ಕಾನ್ಸುಲೇಟ್ ಜನರಲ್ (ದುಬೈ) ಕಚೇರಿಗಳಲ್ಲಿ ನೇರವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಹಲವು ವರ್ಷಗಳಿಂದ ಈ ಸೇವೆಗಳನ್ನು ನಿರ್ವಹಿಸುತ್ತಿದ್ದ ಬಿಎಲ್‌ಎಸ್ ಇಂಟರ್‌ನ್ಯಾಷನಲ್‌ನ(BLS International) ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಭಾರತ ಸರ್ಕಾರ ಈ ಸೇವೆಗಳ ನಿರ್ವಹಣೆಯನ್ನು ಅಲ್ ಹಿಂದ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ (Al Hind Tours & Travels) ಸಂಸ್ಥೆಗೆ ಅಧಿಕೃತವಾಗಿ ವಹಿಸಿದೆ. ಹೊಸ ವ್ಯವಸ್ಥೆಯು ಜುಲೈ 22, 2026ರಿಂದ ಜಾರಿಗೆ ಬಂದಿದೆ.
ಯುಎಇಯಲ್ಲಿ ಪಾಸ್‌ಪೋರ್ಟ್, ವೀಸಾ, ಕಾನ್ಸುಲರ್ ಹಾಗೂ ಅಟೆಸ್ಟೇಶನ್ ಸೇವೆಗಳನ್ನು ಪಡೆಯಲು ಬಯಸುವ ಭಾರತೀಯರು ಮೊದಲು Passport Seva Portalನಲ್ಲಿ ಅರ್ಜಿ ಭರ್ತಿ ಮಾಡಬೇಕು. ಬಳಿಕ consularsevainuae.com ವೆಬ್‌ಸೈಟ್ ಮೂಲಕ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕು. ವೆಬ್‌ಸೈಟ್‌ನಲ್ಲಿ ಪ್ರತಿದಿನ ಬೆಳಿಗ್ಗೆ 9 ಗಂಟೆ ಮತ್ತು ರಾತ್ರಿ 9 ಗಂಟೆಗೆ ಹೊಸ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ನಿಗದಿತ ದಿನಾಂಕ ಮತ್ತು ಸಮಯಕ್ಕೆ ಸಮೀಪದ *Indian Consular Application Centre (ICAC)*ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಒಟ್ಟಾರೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ ಎಂದು ತಿಳಿಸಲಾಗಿದೆ.
ಯುಎಇಯಾದ್ಯಂತ ಒಟ್ಟು 16 ಭಾರತೀಯ ಕಾನ್ಸುಲರ್ ಅಪ್ಲಿಕೇಶನ್ ಕೇಂದ್ರಗಳು ಕಾರ್ಯನಿರ್ವಹಿಸಲಿದ್ದು, ಅವುಗಳು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೇವೆ ನೀಡಲಿವೆ. ಹೊಸ ವ್ಯವಸ್ಥೆಯಿಂದ ಭಾರತೀಯರಿಗೆ ಇನ್ನಷ್ಟು ಸುಗಮ, ವೇಗದ ಹಾಗೂ ತೊಂದರೆ ರಹಿತ ಸೇವೆ ದೊರೆಯಲಿದೆ ಎಂಬ ನಿರೀಕ್ಷೆಯನ್ನು ಯುಎಇಯಲ್ಲಿರುವ ಭಾರತೀಯ ಸಮುದಾಯ ವ್ಯಕ್ತಪಡಿಸಿದೆ.





