ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಾಲಿ ಮುಖ್ಯಮಂತ್ರಿಗಳ ಚುನಾವಣಾ ಪ್ರಮಾಣಪತ್ರಗಳ (Affidavits) ಆಧಾರದ ಮೇಲೆ ಸಿದ್ಧಪಡಿಸಿರುವ ವಿಶ್ಲೇಷಣೆಯಲ್ಲಿ, ಹಲವು ಮುಖ್ಯಮಂತ್ರಿಗಳು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುತ್ತಾರೆ.
ಘೋಷಿತ ಆಸ್ತಿ ವಿವರಗಳ ಪ್ರಕಾರ ಕರ್ನಾಟಕದ ಡಿ.ಕೆ. ಶಿವಕುಮಾರ್ ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿಯಾಗಿದ್ದು, ಅವರ ಘೋಷಿತ ಆಸ್ತಿ ₹1,413 ಕೋಟಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ನಂತರ ಆಂಧ್ರ ಪ್ರದೇಶದ ಎನ್. ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ಸಿ. ಜೋಸೆಫ್ ವಿಜಯ್ ಸ್ಥಾನ ಪಡೆದಿದ್ದಾರೆ.
ದೇಶದ ಟಾಪ್ 10 ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ
- ಡಿ.ಕೆ. ಶಿವಕುಮಾರ್ (ಕರ್ನಾಟಕ) – ₹1,413 ಕೋಟಿ
- ಎನ್. ಚಂದ್ರಬಾಬು ನಾಯ್ಡು (ಆಂಧ್ರ ಪ್ರದೇಶ) – ₹931 ಕೋಟಿ
- ಸಿ. ಜೋಸೆಫ್ ವಿಜಯ್ (ತಮಿಳುನಾಡು) – ₹648 ಕೋಟಿ
- ಪೆಮಾ ಖಂಡು (ಅರುಣಾಚಲ ಪ್ರದೇಶ) – ₹332 ಕೋಟಿ
- ನೇಫಿಯು ರಿಯೊ (ನಾಗಾಲ್ಯಾಂಡ್) – ₹46 ಕೋಟಿ
- ಮೋಹನ್ ಯಾದವ್ (ಮಧ್ಯಪ್ರದೇಶ) – ₹42 ಕೋಟಿ
- ಎನ್. ರಂಗಸ್ವಾಮಿ (ಪುದುಚೇರಿ) – ₹38 ಕೋಟಿ
- ಎ. ರೇವಂತ್ ರೆಡ್ಡಿ (ತೆಲಂಗಾಣ) – ₹30 ಕೋಟಿ
- ಭೂಪೇಂದ್ರ ಪಟೇಲ್ (ಗುಜರಾತ್) – ₹24 ಕೋಟಿ
- ಪ್ರಮೋದ ಸಾವಂತ್ (ಗೋವಾ) – ₹23 ಕೋಟಿ.
ಈ ಅಂಕಿಅಂಶಗಳು ಮುಖ್ಯಮಂತ್ರಿಗಳು ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿರುವ ಸ್ವಯಂ ಘೋಷಿತ ಆಸ್ತಿ ವಿವರಗಳನ್ನು ಆಧರಿಸಿವೆ. ವರದಿಯ ಪ್ರಕಾರ ದೇಶದ ಪ್ರಮುಖ ರಾಜ್ಯಗಳ ಹಲವು ಮುಖ್ಯಮಂತ್ರಿಗಳು ಕೋಟ್ಯಧಿಪತಿಗಳಾಗಿದ್ದು, ಅವರ ಘೋಷಿತ ಆಸ್ತಿಯಲ್ಲಿ ಭೂಮಿ, ಕಟ್ಟಡಗಳು, ಹೂಡಿಕೆಗಳು ಹಾಗೂ ಇತರೆ ಆಸ್ತಿಗಳು ಸೇರಿವೆ.





