07 August 2026 |

ಆಗಸ್ಟ್ 15ರೊಳಗೆ e-KYC ಮಾಡಿಸದಿದ್ದರೆ LPG ಸಂಪರ್ಕ ತಾತ್ಕಾಲಿಕ ಸ್ಥಗಿತ? BPCL ಮಹತ್ವದ ಸೂಚನೆ

  • 06 Aug 2026 08:46:31 PM

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ತನ್ನ LPG ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದೆ. 2026ರ ಆಗಸ್ಟ್ 15ರೊಳಗೆ e-KYC ಪೂರ್ಣಗೊಳಿಸದಿದ್ದರೆ ಗೃಹಬಳಕೆಯ LPG ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.

 

ಒಬ್ಬ ವಿತರಕರ ವ್ಯಾಪ್ತಿಯಲ್ಲೇ ಸುಮಾರು 19,000 LPG ಗ್ರಾಹಕರ ಪೈಕಿ 4,200 ಮಂದಿ ಇನ್ನೂ e-KYC ಪೂರ್ಣಗೊಳಿಸಿಲ್ಲ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ಗ್ರಾಹಕರು ಶೀಘ್ರದಲ್ಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ BPCL ಮನವಿ ಮಾಡಿದೆ.

 

e-KYC ಮಾಡಿಸದಿದ್ದರೆ ಏನಾಗಬಹುದು?

* LPG ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ.

* ಸರ್ಕಾರದ LPG ಸಬ್ಸಿಡಿ ಸಿಗದೇ ಇರಬಹುದು.

* ಗೃಹಬಳಕೆಯ ಸಿಲಿಂಡರ್‌ಗೆ ಬದಲಾಗಿ ವಾಣಿಜ್ಯ ದರ ಅನ್ವಯಿಸುವ ಸಾಧ್ಯತೆ.

 

e-KYC ಹೇಗೆ ಮಾಡಿಸಬಹುದು?

* Hello BPCL ಮೊಬೈಲ್ ಆ್ಯಪ್ ಮೂಲಕ.

* ಅಥವಾ ಸಮೀಪದ BPCL LPG ವಿತರಕರ ಕಚೇರಿಗೆ ಆಧಾರ್ ಕಾರ್ಡ್ ತೆಗೆದುಕೊಂಡು ಭೇಟಿ ನೀಡಿ e-KYC ಪೂರ್ಣಗೊಳಿಸಬಹುದು.

ಇಲ್ಲಿ ಓದಿ: ಬಿಪಿಸಿಎಲ್ LPG e-KYC ಹೇಗೆ ಮಾಡುವುದು? ಮನೆಯಲ್ಲೇ 5 ನಿಮಿಷದಲ್ಲಿ ಪೂರ್ಣಗೊಳಿಸುವ ಸುಲಭ ವಿಧಾನ

 

ಗ್ರಾಹಕರು ಯಾವುದೇ ತೊಂದರೆ ತಪ್ಪಿಸಿಕೊಳ್ಳಲು ಆಗಸ್ಟ್ 15ರೊಳಗೆ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ BPCL ಮನವಿ ಮಾಡಿದೆ.