ಗಂಜಿ, ಅಂಬಲಿ ಜೊತೆಗೆ ತುಪ್ಪ ಬೆಳಗ್ಗಿನ ಹೊತ್ತು ಯಾಕೆ ಸೇವಿಸಬೇಕು ? ಓದಿ ತಿಳಿದುಕೊಳ್ಳಿ

  • 10 Feb 2025 07:20:39 PM

ಪ್ರಾಚೀನ ಭಾರತೀಯರು ಅದರಲ್ಲೂ ಎಲ್ಲಿ ಅಕ್ಕಿಯನ್ನು ಹೆಚ್ಚಾಗಿ ಬಳಸುವ ದಕ್ಷಿಣ ಭಾರತದ ಜನ ಬೆಳಗ್ಗಿನ ಉಪಹಾರಕ್ಕೆ ಗಂಜಿ,ಅಂಬಲಿ ಮತ್ತು ತುಪ್ಪವನ್ನು ತೆಗೆದುಕೊಳ್ಳುತ್ತಿದ್ದರು. ಅವರ ಬೆಳಗ್ಗಿನ ಮೊದಲ ಪ್ರಾಧ್ಯಾನ್ಯತೆ ಅದೇ ಆಗಿತ್ತು.ಯಾಕೆಂದರೆ ಅವರಿಗೆ ಈ ವಿಷಯದ ಬಗ್ಗೆ ಶಾಸ್ತ್ರೀಯವಾದ ತಿಳುವಳಿಕೆ ಇತ್ತು. 

 

ಆದರೆ ಕಾಲ ಬದಲಾಗಿದೆ, ಜಂಕ್ ಫುಡ್ ಗೆ ಈಗಿನ ಕಾಲದ ಜನ ಮನಸೋತಾಗಿದೆ. ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರದಲ್ಲಿ ನಾನಾ ರೀತಿಯ ರಾಸಾಯನಿಕ ಅಂಶಗಳು ಸೇರಿಕೊಂಡು ರುಚಿಯಾಗಿರುವುದರಿಂದ ಈಗಿನ ಕಾಲದ ಜನತೆ ಅದನ್ನೇ ಹೆಚ್ಚಾಗಿ ಸೇವಿಸುತ್ತಿದ್ದಾರೆ. ಜಂಕ್ ಫುಡ್ ಗಳ ಪ್ರಚಾರ ಕೂಡ ಬಹಳ ಜೋರಾಗಿ ನಡೆಯುವುದರಿಂದ ಜನ ಪ್ರಾಚೀನ ತಿಂಡಿ ತಿನಸು ಪದ್ಧತಿಯನ್ನು ಮರೆತು ಬಿಟ್ಟಿದ್ದಾರೆ.

 

ಅನ್ನದ ಗಂಜಿ ಮತ್ತು ಅಂಬಲಿಯನ್ನು ಉಪಯೋಗಿಸಿದರೆ ರಕ್ತದಲ್ಲಿರುವ ವಿಷ ಪದಾರ್ಥಗಳನ್ನು ಮತ್ತು ಕೊಳೆಯನ್ನು ತೊಲಗಿಸುತ್ತದೆ. ಅದರಲ್ಲೂ ಅಂಬಲಿಯಲ್ಲಿರುವ ವಿಟಮಿನ್ ಗಳು ನಿಮ್ಮ ಶರೀರದ ಅರೋಗ್ಯವನ್ನು ಹೆಚ್ಚಿಸುತ್ತದೆ. ಹೊಸ ತಲೆಮಾರಿನವರು ಮಾತ್ರ ಆಧುನಿಕ ಶೈಲಿಯಿಂದ ಕೂಡಿದ ಆಹಾರ ಪದಾರ್ಥಗಳನ್ನು ಇಷ್ಟಪಡುವರು. ಈಗಿನ ಕಾಲದವರು ಗಂಜಿ, ತುಪ್ಪ, ಸೊಪ್ಪು, ಕಾಳುಗಳು ಮುಂತಾದವುಗಳ ಕಡೆ ಗಮನ ಹರಿಸುವುದಿಲ್ಲ.

 

ತುಪ್ಪದಲ್ಲಿ ರಂಜಕ ಮತ್ತು ಉತ್ತಮ ಕೊಬ್ಬಿನ ಅಂಶಗಳಿವೆ. ತುಪ್ಪದ ಕೊಬ್ಬು ದೇಹಕ್ಕೆ ಬಹಳ ಒಳ್ಳೆಯದು. ಅಂಬಲಿ ಮಾಡುವುದರಿಂದ ಬೆಳೆ ಕಾಳುಗಳು ಇದರ ಜೊತೆ ಸೇರಿ ಪ್ರೊಟೀನ್ ಗಳು ಕೂಡ ದೇಹಕ್ಕೆ ಸೇರುತ್ತದೆ. 

 

ಆದ್ದರಿಂದ ಬೆಳಗ್ಗಿನ ಹೊತ್ತು ಗಂಜಿ, ಅಂಬಲಿ ಮಾಡಿ ತುಪ್ಪ ಹಾಕಿ ತಿಂದರೆ ಬಹಳಷ್ಟು ಅರೋಗ್ಯ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಇಡೀ ದಿನ ಹುಮ್ಮಸ್ಸಿನಿಂದ ಇರಬಹುದು. ಈ ರೀತಿಯಾಗಿ ನಮ್ಮ ಪ್ರಾಚೀನ ಭಾರತೀಯರು ಸಮತೋಲನ ಆಹಾರವನ್ನು ಉಂಡು ದೃಢವಾದ ಅರೋಗ್ಯಕರವಾದ ಶರೀರವನ್ನು ಹೊಂದಿದ್ದವರಾಗಿದ್ದರು.

 

ಹಾಗಾದರೆ ಮತ್ತೆ ಯಾಕೆ ತಡ, ಬೆಳಗ್ಗೆ ಎದ್ದು ಗಂಜಿಗೆ ತುಪ್ಪ ಹಾಕಿ ನಾಳೆಯಿಂದಲೇ ತಿನ್ನಲು ಶುರು ಮಾಡಿ ಮತ್ತು ಅರೋಗ್ಯವಾಗಿರಿ.