ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ : ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ( RDPR ) ನಿಮ್ಮ ನಂಬರ್ ರಿಜಿಸ್ಟರ್ ಮಾಡುಹುದರ ಮೂಲಕ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿನಲ್ಲಿ ಹಾಕಿದ ಅಪ್ಲಿಕೇಶನ್ ಸ್ಟೇಟಸ್ ನಿಂದ ಹಿಡಿದು ತೆರಿಗೆ ಬಗ್ಗೆ ನಿಮಗೆ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಹೌದು, ನಿಮಗೆ ಈ ಸೌಲಭ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ದೊರೆಯುತ್ತಿದೆ. 8277506000 ಈ ಮೊಬೈಲ್ ನಂಬರ್ ನ್ನು ನಿಮ್ಮ ಮೊಬೈಲ್ ನಲ್ಲಿ ಉಳಿಸಿಕೊಳ್ಳುವುದರಿಂದ ನಿಮಗೆ ಸುಲಭವಾಗಿ ಪಂಚಾಯತ್ ಜೊತೆ ಸಂಪರ್ಕಿಸಬಹುದು.
ಹಾಗಾದರೆ ಬನ್ನಿ ತಿಳಿಯೋಣ ಹೇಗೆ ನಾವು ವಾಟ್ಸ್ ಆ್ಯಪ್ ಮೂಲಕ ನಮ್ಮ ಗ್ರಾಮ ಪಂಚಾಯತ್ ಜೊತೆ ಸಂಪರ್ಕ ಮಾಡಬಹುದು ಎಂಬಹುದನ್ನು..
> ಮೊದಲಿಗೆ ಮೊಬೈಲ್ ನಂಬರ್ 8277506000 ನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.
> ಸೇವ್ ಮಾಡಿದ ನಂತರ ವಾಟ್ಸ್ ಆ್ಯಪ್ ಗೆ ಲಾಗಿನ್ ಆಗಿ.
> ವಾಟ್ಸ್ ಆ್ಯಪ್ ನಲ್ಲಿ ನಿಮಗೆ RDPR-Gok ಹೆಸರಿನ ಅಕೌಂಟ್ ಓಪನ್ ಆಗುತ್ತದೆ.
> ಈಗ ಈ ನಂಬರಿಗೆ Hi ಎಂದು ಕಳಿಸಿ.
> ಅವಾಗ ನಿಮಗೆ ಸ್ವಯಂಚಾಲಿತ ಸುಸ್ವಾಗತರ ಮೆಸೇಜ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬರುತ್ತದೆ.
> ನಂತರದ ಹಂತದಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ನಿಮಗೆ ಅನುಕೂಲಕರವಾದ ಭಾಷೆಯನ್ನು ಆರಿಸಿಕೊಳ್ಳಿ.
> ನೀವು ಭಾಷೆಯನ್ನು ಸೆಲೆಕ್ಟ್ ಮಾಡಿದ ನಂತರ, ನಂತರದ ಪೇಜ್ ನಲ್ಲಿ ನಿಮಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಪಟ್ಟಿ ಬರಲಿದೆ.
> ನಿಮಗೆ ಸಂಬಂಧಪಟ್ಟ ಜಿಲ್ಲೆಯ ನಂಬರ್ ನ್ನು ಕಳುಹಿಸಿ.
> ನಂತರ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಎಲ್ಲಾ ತಾಲೂಕಿನ ಪಟ್ಟಿ ಬರುತ್ತದೆ.
> ನಿಮಗೆ ಸಂಬಂಧಪಟ್ಟ ತಾಲೂಕಿನ ನಂಬರ್ ಟೈಪ್ ಮಾಡಿ ಕಳುಹಿಸಿ.
> ಅದಾದನಂತರ, ನಿಮ್ಮ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಗ್ರಾಮಪಂಚಾಯತ್ ನ ಪಟ್ಟಿ ಬರುತ್ತದೆ.
> ಇಲ್ಲೂ ಕೂಡ ನಿಮಗೆ ಬೇಕಾದ ಗ್ರಾಮವನ್ನು ನಮೂದಿಸಿ.
> ನೀವು ಆಯ್ಕೆ ಮಾಡಿದ ಗ್ರಾಮದ ಹೆಸರನ್ನು ಮತ್ತೊಮ್ಮೆ ನಮೂದಿಸಿದ ನಂತರ ನೀವು ನಮೂದಿಸಿದ ಎಲ್ಲಾ ವಿವರಗಳು ಮೊಬೈಲ್ ಸ್ಕ್ರೀನ್ ಮೇಲೆ ಬರುತ್ತದೆ. ನೀವು ನೀಡಿದ ಎಲ್ಲಾ ಮಾಹಿತಿ ಸರಿ ಇದ್ದರೆ YES ಎಂದು ಕ್ಲಿಕ್ ಮಾಡುವ ಮೂಲಕ ನೀವು ಪಂಚಾಯತ್ ಗೆ ಸಂಬಂಧಪಟ್ಟ ವಿಷಯಗಳನ್ನು ವಾಟ್ಸ್ ಆ್ಯಪ್ ಮೂಲಕ ತಿಳಿಯಬಹುದಾಗಿದೆ.
ಮೇಲಿನ ಎಲ್ಲಾ ಹೆಜ್ಜೆಗಳನ್ನು ಮುಗಿಸಿದ ನಂತರ login ಅಥವಾ register ಆಯ್ಕೆ ಮಾಡಿ ಮುಂದಿನ ಕಾರ್ಯವಿಧಾನಗಳನ್ನು ಮಾಡಬಹುದಾಗಿದೆ. ನಿಮ್ಮ ಸರಿಯಾದ ಮೊಬೈಲ್ ನಂಬರ್, ಮೊದಲ ಮತ್ತು ಕೊನೆಯ ಹೆಸರು, ವಿಳಾಸ ಕೊಟ್ಟ ನಂತರ ಮುಂದಿನ ಪ್ರಕ್ರಿಯೆ ಮಾಡಬಹುದು.
ಈ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿದ ನಂತರ ನೀವು ಪಂಚಾಯತ್ ಗೆ ಸಂಬಂಧಪಟ್ಟ ನಿಮ್ಮ ಅಪ್ಲಿಕೇಶನ್ ಸ್ಟೇಟಸ್, ಸರ್ಟಿಫಿಕೇಟ್ ಬಗ್ಗೆ, ಡೌನ್ ಲೋಡ್ ರಶೀದಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ ಎನ್ ಆರ್ ಈ ಜಿ ಎಸ್) Job ಕಾರ್ಡ್ ಬಗ್ಗೆ, ದೂರುಗಳು, ನಾಡಕಛೇರಿ ಸರ್ವಿಸ್ ಬಗ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟ , ಟ್ಯಾಕ್ಸ್ ಬಾಕಿ, ಈ ಎಲ್ಲಾ ವಿವರಗಳ ಜೊತೆಗೆ ಮತ್ತಷ್ಟು ಮಾಹಿತಿಗಳನ್ನು ಪಡೆಯಬಹುದಾಗಿದೆ.