26 July 2025 | Join group

ಯಾವ ದೇಶದಲ್ಲಿ ಎಷ್ಟು 'ಅಣುಬಾಂಬ್' ಇದೆ ಎಂದು ತಿಳಿಯುವ ಕುತೂಹಲ ಇದೆಯೇ? ಇಲ್ಲಿದೆ ವಿವರ

  • 19 Jun 2025 08:47:05 PM

ನವದೆಹಲಿ: ಸ್ಪಷ್ಟವಾಗಿ ಹೇಳುವುದಾದರೆ ಜಗತ್ತಿನಾದ್ಯಂತ ಪರಿಸ್ಥಿತಿ ಸ್ಥಿರವಾಗಿಲ್ಲ. ವಿಶೇಷವಾಗಿ ವಿಶ್ವದ ಪ್ರಮುಖ ರಕ್ಷಣಾ ಬಲಿಷ್ಠ ರಾಷ್ಟ್ರಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಹೋರಾಟ ಹಲವು ತಿಂಗಳುಗಳಿಂದ ನಡೆಯುತ್ತಿದೆ ಮತ್ತು ಈಗ ಇಸ್ರೇಲ್ ಮತ್ತು ಇರಾನ್ ಯುದ್ಧದ ಮೈದಾನದಲ್ಲಿದೆ.

 

ವಿಶ್ವದ ಯಾವ ದೇಶದಲ್ಲಿ ಎಷ್ಟು ಅಣುಬಾಂಬ್ ಇದೆ?

ವಿಶ್ವದ ಅಣುಬಾಂಬ್ ಸಂಗ್ರಹದಲ್ಲಿ ರಷ್ಯಾ ಮತ್ತು ಅಮೇರಿಕಾ ಈಗಾಗಲೇ 90% ರಷ್ಟು ಹೊಂದಿದೆ. ಅಣ್ವಸ್ತ್ರ ಕಣ್ಗಾವಲು ಸಂಸ್ಥೆ ಸ್ಟಾಕ್ ಹೋಮ್ ಎನ್ನುವ ಅಂತರಾಷ್ಟ್ರೀಯ ಸಂಸ್ಥೆ ಈ ಬಗ್ಗೆ ಸಂಶೋಧನೆ ನಡೆಸಿದ ಅಧ್ಯಯನದಲ್ಲಿ ಮಾಹಿತಿಯೊಂದನ್ನು ಹೊರಡಿಸಿದೆ.

 

ರಷ್ಯಾದ ಬಳಿ 4309 ಅಣುಬಾಂಬ್ ಇದ್ದರೆ, ಅಮೇರಿಕಾ ಬಳಿ 3700 ಅಣುಬಾಂಬ್ ಇವೆ. ಚೀನಾ 600, ಫ್ರಾನ್ಸ್ 290, ಬ್ರಿಟನ್ 225, ಭಾರತ 180, ಪಾಕಿಸ್ತಾನ 170, ಇಸ್ರೇಲ್ 90, ಉತ್ತರ ಕೊರಿಯಾ 50 ಅಣುಬಾಂಬ್ ಗಳು ಇವೆ ಎಂದು ವರದಿ ಮಾಡಿದೆ.

 

ಭಾರತಲ್ಲಿ 10 ಅಣುಬಾಂಬ್ ಪಾಕಿಸ್ತಾನಕ್ಕಿಂತ ಹೆಚ್ಚಿದೆ. ಆದರೆ ಚೀನಾದ ಅಣ್ವಸ್ತ್ರ ಬೆಳವಣಿಗೆ ಬಹಳ ವೇಗದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಭಾರತದಲ್ಲೂ ಈ ವರ್ಷ 8 ಅಣ್ವಸ್ತ್ರ ಸೇರ್ಪಡೆಯಾಗಿರುವುದು ಉತ್ತಮ ಬೆಳವಣಿಗೆ ಕಂಡಿದೆ.

 

2024 ರಲ್ಲಿ ಚೀನಾ ಬಳಿ 500 ಅಣುಬಾಂಬುಗಳಿದ್ದರೆ, 2025 ರಲ್ಲಿ 600ಕ್ಕೆ ಏರಿಕೆಯಾಗಲಿದೆ. ಅಧ್ಯಯನದ ಪ್ರಕಾರ 2035ರ ವರೆಗೆ ಚೀನಾದ ಅಣುಬಾಂಬ್ ಸಂಖ್ಯೆ 1500ಕ್ಕೆ ಏರಲಿದೆ ಎಂದು ವರದಿ ತಿಳಿಸಿದೆ.