Indian Passport: ಭಾರತೀಯ ಪಾಸ್‌ಪೋರ್ಟ್(Passport) ನಲ್ಲಿ ಬಹಳ ಬೆಳವಣಿಗೆಯಾಗಿದೆ. ನಿಮ್ಮ ಹಳೆಯ ಪಾಸ್‌ಪೋರ್ಟ್ ನ್ನು ಹೊಸ ನವೀಕರಿಸಿದ ಪಾಸ್‌ಪೋರ್ಟ್‌ನೊಂದಿಗೆ ಬದಲಾಯಿಸಬಹುದಾಗಿದೆ. ಹೊಸ ಭಾರತೀಯ ಪಾಸ್‌ಪೋರ್ಟ್ ಬಹಳಷ್ಟು ಬದಲಾವಣೆಗಳನ್ನು ಹೊಂದಿದೆ.
ಈ ಪಾಸ್‌ಪೋರ್ಟ್ ನ ಮುಂಭಾಗದ ಕವರ್‌ನಲ್ಲಿ ಒಂದು ಚಿಕ್ಕ ಚಿನ್ನದ ಚಿಹ್ನೆಯನ್ನು ಕಾಣಬಹುದು. ಇದು ಒಂದು ತರಹದ ಕಂಪ್ಯೂಟರ್ ತರ ಕೆಲಸ ಮಾಡುತ್ತದೆ. ಇದರರ್ಥ ಹೊಸ ಭಾರತೀಯ ಪಾಸ್‌ಪೋರ್ಟ್, ಸ್ಮಾರ್ಟ್(Smart) ಪಾಸ್‌ಪೋರ್ಟ್ ಆಗಿದೆ.
ಹೊಸ ಭಾರತೀಯ ಪಾಸ್‌ಪೋರ್ಟ್ ಒಳಗಡೆ ಮೈಕ್ರೋ ಚಿಪ್(Micro-chip) ಮತ್ತು ಹಿಂಬದಿಯ ಒಳಗೆ ಆಯತಾಕಾರದ ಆಂಟೆನಾ ಹುದುಗಿದೆ. ಈ ಸಣ್ಣ ಚಿಪ್ ಅಂಚೆ ಚೀಟಿಗಿಂತ ಚಿಕ್ಕದಾಗಿದೆ. ಇದು 64 ಕಿಲೋಬೈಟ್‌ಗಳ ಮೆಮೊರಿ(Memory)ಯನ್ನು ಹೊಂದಿದೆ. ನಿಮ್ಮ ಫೋಟೋಗಳು, ಫಿಂಗರ್‌ಪ್ರಿಂಟ್‌ಗಳು(Fingerprint), ಜನ್ಮ ದಿನಾಂಕ ಮತ್ತು ನಿಮ್ಮ ಕೊನೆಯ 30 ಪ್ರವಾಸಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಇದರಲ್ಲಿ ಸಂಗ್ರಹಿಸಲಾಗುತ್ತದೆ.
ಈ ಆಧುನಿಕರಣದಿಂದ, ವಿಮಾನ ನಿಲ್ದಾಣದಲ್ಲಿ ಸ್ಕ್ಯಾನ್(Scan) ಮಾಡಿ ಕೆಲವು ಸೆಕೆಂಡುಗಳಲ್ಲಿ ಆ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳು ಪಡೆಯಬಹುದಾಗಿದೆ. ನಿಮ್ಮ ಪ್ರಯಾಣದ ಸಂದರ್ಭದಲ್ಲಿ ಹೊಸ ಪಾಸ್‌ಪೋರ್ಟ್ ಇದ್ದಲ್ಲಿ, ಇನ್ನು ಮುಂದೆ ಗಂಟೆಗಟ್ಟಲೆ ಕಳೆಯಬೇಕಾಗಿಲ್ಲ. ನಿಮ್ಮ ವಿಳಾಸ, ನಿಮ್ಮ ಪೋಷಕರ ಹೆಸರುಗಳನ್ನು ಹುಡುಕಿಕೊಂಡು ಸಮಯ ವ್ಯರ್ಥ ಮಾಡುವ ಅವಶ್ಯಕತೆಯಿಲ್ಲ.
ಮೂಲತಃ ಹೊಸ ಪಾಸ್‌ಪೋರ್ಟ್ ಸ್ಮಾರ್ಟ್ ಆಗಿದೆ ಮತ್ತು ಇದು ವಿಮಾನ ನಿಲ್ದಾಣದಲ್ಲಿ ನಿಮ್ಮ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಆದ್ದರಿಂದ ಬಹುಶಃ ನಿಮ್ಮ ಸುಕ್ಕುಗಟ್ಟಿದ ಹಳೆಯ ಪಾಸ್‌ಪೋರ್ಟ್ ಅನ್ನು ನಿವೃತ್ತಿ ಮಾಡಿ ಅಪ್‌ಗ್ರೇಡ್ ಅನ್ನು ಆನಂದಿಸುವ ಸಮಯ ಬಂದಿದೆ.