ಒಮ್ಮೆ ಏಸಿ ಗೆ ಶರಣಾದರೆ ಮತ್ತೆ ಅದು ಇಲ್ಲದೆ ಇರಲು ಕಷ್ಟವಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಬೇಸಿಗೆಯ ಬಿಸಿಲಿನ ಕಾರಣ ಹವಾನಿಯಂತ್ರಣ ಅಗತ್ಯವಿದೆ. ಬಿಸಿಲಾಗಲಿ, ಮಳೆಯಾಗಲಿ, ಚಳಿಯೇ ಇರಲಿ ಕೆಲವರಿಗೆ ಏಸಿ ಬೇಕೇ ಬೇಕು ಎನ್ನುವ ಪರಿಸ್ಥಿತಿ ಬಂದೊದಗಿದೆ. ಎಸಿಯಲ್ಲಿ ಇದ್ದು ಇದ್ದು ಅದಕ್ಕೆ ಒಗ್ಗಿ ಹೋಗಿರುವವರು ಸಾಮಾನ್ಯವಾಗಿ ಅದನ್ನೇ ಇಷ್ಟಪಡುತ್ತಾರೆ.
ಆದರೆ ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ತೊಂದರೆಗಳಾಗಬಹುದು ಎಂಬುದನ್ನು ನಾವು ಯಾವತ್ತೂ ಯೋಚಿಸಲ್ಲ. ಕೆಲವು ಅಧ್ಯಯನಗಳ ಪ್ರಕಾರ ಏಸಿ ಇಷ್ಟ ಪಡುವವರಿಗೆ ಮೂಳೆ (Bone Health) ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದಿದ್ದಾರೆ.
ಈ ರೀತಿ ಯಾಕಾಗುತ್ತದೆ? ಇದಕ್ಕೆ ಪರಿಹಾರವೇನು?
ಇದು ಗೊತ್ತಿದ್ದೋ ಗೊತ್ತಿಲ್ಲದೆಯೋ ಮನುಷ್ಯನ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಡಾಕ್ಟರ್ ಗಳು ತಿಳಿಸಿದ್ದಾರೆ. ದೀರ್ಘಕಾಲದ ವರೆಗೆ ಎಸಿಯಲ್ಲಿ ಇರುವುದು ಮೂಳೆಗಳಿಗೆ ಹಾನಿಕಾರಕ. ಏಕೆಂದರೆ ಕಡಿಮೆ ತಾಪಮಾನದಲ್ಲಿ ದೀರ್ಘಕಾಲ ಇರುವುದರಿಂದ ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೀಲು ನೋವಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ನಾವು ನಿರಂತರವಾಗಿ ಅಥವಾ ದೀರ್ಘಕಾಲದ ವರೆಗೆ ಕಡಿಮೆ ತಾಪಮಾನದಲ್ಲಿಯೇ ಇದ್ದಾಗ ದೇಹದ ಚಯಾಪಚಯ ಕ್ರಿಯೆಯು ಕ್ರಮೇಣ ನಿಧಾನವಾಗಲು ಪ್ರಾರಂಭಿಸುತ್ತದೆ. ಇದು ಮೂಳೆಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿ ಅವುಗಳನ್ನು ಬಲಪಡಿಸಲು ಅಗತ್ಯವಾದ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ. ಈ ಸ್ಥಿತಿಯಲ್ಲಿ ದೀರ್ಘಕಾಲ ಇರುವುದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೀಲು ನೋವನ್ನು ಹೆಚ್ಚಿಸುತ್ತದೆ.
ಇತೀಚಿನ ದಿನಗಳಲ್ಲಿ ಆಫೀಸ್ ಮತ್ತು ಕಾರುಗಳಲ್ಲಿ ಅತಿಯಾಗಿ ಏಸಿ ಬಳಕೆಯಾಗುವುದರಿಂದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅದರ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ತುಂಬಾ ಉತ್ತಮ.