Ration Card Karnataka : ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕ ಇಲಾಖೆ ( Department of Food and Civil Supplies ) ಪಡಿತರ ಚೀಟಿ ತಿದ್ದುಪಡಿ ಮಾಡಲು ಬಯಸುವಂತಹ ಕುಟುಂಬಗಳಿಗೆ ಸುವರ್ಣಾವಕಾಶ ಮಾಡಿಕೊಟ್ಟಿದೆ. ರೇಷನ್ ಕಾರ್ಡ್ ನಲ್ಲಿ ಇರುವ ತಪ್ಪು ಅಥವಾ ಅಪೂರ್ಣ ಮಾಹಿತಿಯಿಂದಾಗಲಿ ಬಹಳಷ್ಟು ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪಡಿತರ ಚೀಟಿಯ ಮಾಹಿತಿಯನ್ನು ತಿದ್ದುಪಡಿ ಮಾಡಲು ಅಥವಾ ಹೊಸ ಹೆಸರು ನೋಂದಾಯಿಸಲು ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕ ಇಲಾಖೆ ಆನ್ಲೈನ್ ಅಥವಾ ನೇರವಾಗಿ ಗ್ರಾಮ್ ಒನ್ (Grama One ) ಕೇಂದ್ರಗಳಿಗೆ ಭೇಟಿ ನೀಡಿ ಮಾಡಲು ಸೂಚನೆ ನೀಡಿದೆ. ಗ್ರಾಮ ಕೇಂದ್ರಗಳು ಬೆಳಗ್ಗೆ 10:00 ರಿಂದ ಸಂಜೆ 5:00 ರವರಿಗೆ ಅರ್ಜಿ ಸ್ವೀಕೃತ ಮಾಡುತ್ತದೆ.
ಪಡಿತರ ಚೀಟಿಯಲ್ಲಿ ಯಾವೆಲ್ಲ ತಿದ್ದುಪಡಿ ಮಾಡಲು ಅವಕಾಶವಿದೆ ಎಂಬುಹುದನ್ನು ನೋಡುವ ಬನ್ನಿ ;
¤ ಹೊಸ ಕುಟುಂಬದ ಸದಸ್ಯರ ಸೇರ್ಪಡೆ - ಹುಟ್ಟಿದ ಮಕ್ಕಳು ಅಥವಾ ಇನ್ನಿತರ ಹೊಸ ಸದಸ್ಯರನ್ನು ಸೇರಿಸಲು ಅವಕಾಶ.
¤ ಕುಟುಂಬದ ಸದಸ್ಯರ ತೆಗೆಯುವಿಕೆ - ಮರಣ ಅಥವಾ ಇನ್ನಿತರ ಯಾವುದೇ ಕಾರಣಕ್ಕೆ ಸದಸ್ಯರನ್ನು ತೆಗೆಯಲು.
¤ ಕುಟುಂಬದ ಮುಖ್ಯಸ್ಥರ ಬದಲಾವಣೆ.
¤ ವಿಳಾಸ ಬದಲಾವಣೆ - ಹೊಸ ಸ್ಥಳಕ್ಕೆ ಸ್ಥಳಾಂತರವಾಗಿದ್ದರೆ ಅದನ್ನು ಅಪ್ಡೇಟ್ ಮಾಡಬಹುದಾಗಿದೆ.
¤ ನ್ಯಾಯ ಬೆಲೆ ಅಂಗಡಿ ಬದಲಾವಣೆ - ಪುನರ್ವಿಂಗಡಣೆ ಅಥವಾ ಊರು ಬದಲಾವಣೆ ಸಂದರ್ಭದಲ್ಲಿ.
¤ ಆಧಾರ್ ಲಿಂಕ್ ಮತ್ತು ಕೆವೈಸಿ (KYC) ಬದಲಾವಣೆ.
ಪಡಿತರ ಚೀಟಿ ತಿದ್ದುಪಡಿಗೆ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ;
¤ ಆಧಾರ್ ಕಾರ್ಡ್
¤ ರೇಷನ್ ಕಾರ್ಡ್ ಪ್ರತಿ
¤ ರಿಜಿಸ್ಟರ್ಡ್ ಮೊಬೈಲ್ ನಂಬರ್ - ಒಟಿಪಿ ದೃಡೀಕರಣಕ್ಕಾಗಿ
¤ ಸಂಬಂದಿತ ದಾಖಲೆಗಳು - ಜನನ ಪತ್ರ , ಮರಣ ಪತ್ರ , ವಿಳಾಸ ದಾಖಲೆ, ಪಾವತಿ ಚೀಟಿ, ಹಳೆ ಪಡಿತರ ಚೀಟಿ ಇನ್ನಿತರ ಸಂಬಂಧಪಟ್ಟ ದಾಖಲೆಗಳು.
ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕ ಇಲಾಖೆ ನವಂಬರ್ ನಿಂದ ಜನವರಿವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿತ್ತು ಮತ್ತೆ ಇದೀಗ ಫೆಬ್ರವರಿ 28, 2025 ರವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಆದಷ್ಟು ಬೇಗ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ಕೊಟ್ಟು ನಿಮ್ಮ ಪಡಿತರ ಚೀಟಿ ( ರೇಷನ್ ಕಾರ್ಡ್ ) ತಿದ್ದುಪಡಿಯನ್ನು ಮಾಡಿಸಿಕೊಳ್ಳಿ. ಮತ್ತೊಮ್ಮೆ ಯಾವಾಗ ಸರಕಾರ ಈ ಅವಕಾಶವನ್ನು ತೆರಿಯಲಿದೆ ಎಂಬಹುದು ಹೇಳಕ್ಕಾಗಲ್ಲ.