25 July 2025 | Join group

ಪಶುಪಾಲನೆ ಇಲಾಖೆಯಿಂದ Cow Mat ಮೇಲೆ ಗರಿಷ್ಠ 90% ಸಬ್ಸಿಡಿ ಸಿಗಲಿದೆ

  • 23 Jun 2025 10:03:31 AM

Cow Mat Subsidy: ನಿಮ್ಮ ಕೊಟ್ಟಿಗೆಯಲ್ಲಿರುವ ಹಸುಗಳಿಗೆ ಆರಾಮದಾಯಕ ನೆಲವನ್ನು ಒದಗಿಸಬೇಕೇ? ಇದೀಗ ಕೌ ಮ್ಯಾಟ್ (Cow Mat) ನ್ನು 50% ನಿಂದ 90% ವರೆಗಿನ ಸಬ್ಸಿಡಿ ಪಡೆಯಲು ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕರ್ನಾಟಕ ಹಾಲು ಒಕ್ಕೂಟ (KMF) ಮತ್ತು ಪಶುಪಾಲನಾ ಇಲಾಖೆಯಿಂದ ಕೌ ಮ್ಯಾಟ್ ಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಅವಕಾಶವಿದೆ.

 

ಸಬ್ಸಿಡಿ ಪಡೆಯಲು ನಿಯಮಗಳು

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ರೈತರಿಗೆ ಕನಿಷ್ಠ 2 ಜಾನುವಾರುಗಳನ್ನು (ಹಸು/ಎಮ್ಮೆ) ಹೊಂದಿರಬೇಕು.

ಈ ಹಿಂದೆ ಕೌ ಮ್ಯಾಟ್ ಸಬ್ಸಿಡಿ ಪಡೆದಿರಬಾರದು.

 

ಅಪ್ಲೈ ಮಾಡುವ ವಿಧಾನ:

ಕೆಎಂಫ್ : ನೀವು ಹಾಲು ಹಾಕುವ ಕೆಎಂಫ್ ಡೈರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

ಪಶುಪಾಲನಾ ಇಲಾಖೆ: ಪಶು ಆಸ್ಪತ್ರೆಗೆ ಭೇಟಿ ನೀಡಿ, ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು.

 

ಬೇಕಾಗಿರುವ ದಾಖಲೆಗಳು:

ಆಧಾರ್ ಕಾರ್ಡ್

ಜಮೀನಿನ ಪತ್ರ (RTC ಅಥವಾ ಬೇರೆ)

ಫೋಟೋ

ಬ್ಯಾಂಕ್ ಪಾಸ್ ಬುಕ್

ಹಸು ಸಾಕಣೆಯ ದೃಡೀಕರಣ ಪತ್ರ

 

ಸಬ್ಸಿಡಿ ಪಡೆಯುವ ಪರ್ಸಂಟೇಜ್

ಸಾಮಾನ್ಯ ವರ್ಗದ ರೈತರಿಗೆ - 50%

SC/ST ವರ್ಗದ ರೈತರಿಗೆ - 90%

 

ಮಳೆಗಾಲದಲ್ಲಿ ತಮ್ಮ ಹಸುಗಳು ಬೆಚ್ಚಗೆ ಇರಲು ಈ ಕೌ ಮ್ಯಾಟ್ ತುಂಬಾ ಉಪಯೋಗಕಾರಿಯಾಗಬಹುದು.