ಕೆಲ ಮಾಧ್ಯಮಗಳಲ್ಲಿ ಜುಲೈ 15, 2025 ರಿಂದ, ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಟೋಲ್‌ಗಳನ್ನು ಪಾವತಿಸಬೇಕು ಮತ್ತು FASTag ಅಳವಡಿಸಿರಬೇಕು ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ಮುಂದೆ ಬೈಕ್ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಫ್ರೀ ಅನುಭವದ ಸವಲತ್ತು ಸಿಗುವುದಿಲ್ಲ, ಫ್ರೀ ಪಾಸ್ ರದ್ದುಗೊಳಿಸಲಾಗುವುದು ಎಂಬ ವದಂತಿ ವೈರಲ್ ಆಗುತ್ತಿದೆ.
ಈ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟೀಕರಣ ನೀಡಿದ್ದು ಇಂತಹ ಸುದ್ದಿ ವದಂತಿಗಳಿಗೆ ಕಿವಿ ಕೊಡಬಾರದಾಗಿ ತಿಳಿಸಿದೆ.
NHAI ಸಂಸ್ಥೆ ತನ್ನ FactCheck ನಲ್ಲಿ ಈ ರೀತಿ ಬರೆದುಕೊಂಡಿದೆ “ #FactCheck: ಭಾರತ ಸರ್ಕಾರವು ದ್ವಿಚಕ್ರ ವಾಹನಗಳ ಮೇಲೆ ಬಳಕೆದಾರ ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. #NHAI ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕವನ್ನು ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ. #FakeNews ಎಂದು ನಮೂದಿಸಿದೆ.
ಈ ಸಂದೇಶವನ್ನು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಟ್ಯಾಗ್ ಮಾಡುವ ಮೂಲಕ ಸುಳ್ಳು ಸಂದೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ಬೈಕ್ ಸವಾರರಿಗೆ ಜುಲೈ 15ರ ನಂತರ ಟೋಲ್ ಕಟ್ಟಲಿದೆ ಎನ್ನುವ ಸುದ್ದಿಯನ್ನು ಸುಳ್ಳು ಎಂದು ತಿಳಿಸುವುದರ ಜೊತೆಗೆ ಸಂಪೂರ್ಣವಾಗಿ ತಳ್ಳಿ ಹಾಕಿದೆ.