ನಂದಿನಿ ನದಿಯ ತಟದಲ್ಲಿ ನೆಲೆಸಿರುವ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ದಿನಾಲೂ ಸಾವಿರಗಟ್ಟಲೆ ಭಕ್ತಾದಿಗಳು ದೇವರ ದರ್ಶನ ಪಡೆಯಲು ಭೇಟಿ ಕೊಡುತ್ತಾರೆ. ಈ ಸಾನಿಧ್ಯಕ್ಕೆ ಬರುವ ಭಕ್ತಾದಿಗಳಿಗೆ ದರ್ಶನ ಸುಗಮವಾಗಲಿ ಎಂದು ದೇವಸ್ಥಾನದ ಆನ್ಲೈನ್ ಸೇವೆಯನ್ನು ಆರಂಭಿಸಿದ್ದಾರೆ.
ಭಕ್ತರು http://www.kateeldevi.in/ ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ದರ್ಶನದ ಸಮಯ, ಸೇವೆಯ ವಿವರ ಮತ್ತು ಪ್ರತಿ ಸೇವೆಯ ದರ ಮತ್ತು ಹಲವಾರು ವಿವರಗಳು ಒಂದೇ ಫ್ಲಾಟ್ ಫಾರಂ ನಲ್ಲಿ ದೊರೆಯಲಿದೆ.
ನೀವು ದೇವಸ್ಥಾನದ ವೆಬ್ ಸೈಟ್ ಗೆ ಹೊಸಬರಾಗಿದ್ದರೆ, ನ್ಯೂ ಯೂಸರ್ ಸೈನ್ ಅಪ್ (New User Signup) ಮೂಲಕ ರಿಜಿಸ್ಟರ್ ಮಾಡಿ ನಂತರ ಮುಂದಿನ ಪ್ರಕ್ರಿಯೆ ಮಾಡಬೇಕಾಗುತ್ತದೆ.
ಸೇವೆಯ ಟಿಕೆಟ್ ಪಡೆದ ನಂತರ NEFT/RTGS ವರ್ಗಾವಣೆ ವಿವರಗಳು ಮತ್ತು ವಿಳಾಸವನ್ನು kateelkateel@gmail.com ಗೆ ಇಮೇಲ್ ಮಾಡದಲ್ಲಿ ದೇವಸ್ಥಾನದ ಕಚೇರಿ ರಶೀದಿಯನ್ನು ಉತ್ಪಾದಿಸಲು ಮತ್ತು ಅಂಚೆ ಮೂಲಕ ದೇವರ ಪ್ರಸಾದವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು ವೆಬ್ ಸೈಟ್ ಮೂಲಕ ಭಕ್ತರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: KSRTC ಬಸ್ ಟಿಕೆಟ್ ಬೇಕಾ? ಮೊಬೈಲ್ ಸಾಕು – ಮನೆಯಲ್ಲೇ ಕುಳಿತು ಬುಕ್ ಮಾಡಿ