ಕರ್ನಾಟಕ ಬ್ಯಾಂಕ್ ತನ್ನ ಎಲ್ಲ ಗ್ರಾಹಕರಿಗೆ, ಹಿತಾಸಕ್ತಿದಾರರಿಗೆ ಮತ್ತು ಹೂಡಿಕೆದಾರರಿಗೆ ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದು, ಇತ್ತೀಚೆಗೆ ಪ್ರಕಟವಾದ ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕರು (Managing Director & CEO) ರಾಜೀನಾಮೆ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಆತಂಕ ಅಥವಾ ಗೊಂದಲ ಹೊಂದಬೇಕಿಲ್ಲ ಎಂದು ಕರ್ನಾಟಕ ಬ್ಯಾಂಕ್ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಬ್ಯಾಂಕ್ ನಿರಂತರವಾಗಿ ತನ್ನ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳನ್ನು ನೀಡುವಲ್ಲಿ ಬದ್ಧವಾಗಿದೆ.
ಬದಲಾಗುವ ಆಡಳಿತಾತ್ಮಕ ಸ್ಥಿತಿಗಳು ಸಂಸ್ಥೆಯ ದೀರ್ಘಕಾಲೀನ ದೃಷ್ಠಿಕೋನ ಮತ್ತು ಬೆಳವಣಿಗೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ನಮ್ಮ ಮೇಲೆ ನೀವು ಇಟ್ಟಿರುವ ನಂಬಿಕೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ ಮತ್ತು ಭವಿಷ್ಯದಲ್ಲಿಯೂ ಅದನ್ನೇ ನಿರ್ವಹಿಸುತ್ತೇವೆ ಎಂದು ತಿಳಿಸಿದೆ.
ಬ್ಯಾಂಕ್ ತನ್ನ ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಪೂರ್ಣ ವಿಶ್ವಾಸ ಹಾಗೂ ಪ್ರಜ್ಞೆಯಿಂದ ಮುಂದುವರೆಸುತ್ತಿದೆ. ಸಂಸ್ಥೆಯ ಕಾರ್ಯಕ್ಷಮತೆ, ಆರ್ಥಿಕ ಸ್ಥಿರತೆ ಮತ್ತು ಗ್ರಾಹಕ ಸೇವೆಯ ಗುಣಮಟ್ಟದ ಮೇಲೆ ಈ ರಾಜೀನಾಮೆಯಿಂದ ಯಾವುದೇ ಪ್ರಭಾವ ಬೀರುವುದಿಲ್ಲ ಎಂದಿದೆ ದೃಢಪಡಿಸಿದೆ.
ಇದನ್ನೂ ಓದಿ: ಕರ್ನಾಟಕ ಬ್ಯಾಂಕ್ ನಲ್ಲಿ ಖರ್ಚು ವೆಚ್ಚಗಳ ಪರಿಶೋಧನೆ : ಎಂಡಿ ಮತ್ತು ಕಾರ್ಯನಿರ್ವಾಹಕರ ರಾಜೀನಾಮೆ