12 July 2025 | Join group

'ಕಳ್ಳ ಸಿಮ್' ಜಾಲಕ್ಕೆ ಬಲಿಯಾಗಬೇಡಿ – ಈಗಲೇ 'ಸಂಚಾರ್ ಸಾಥಿ'ನಲ್ಲಿ ನಿಮ್ಮ ಹೆಸರಿನ ಸಿಮ್‌ಗಳ ಪರಿಶೀಲನೆ ಮಾಡಿ

  • 06 Jul 2025 04:59:35 PM

ಇತ್ತೀಚಿನ ದಿನಗಳಲ್ಲಿ ನಮಗೆ ಅರಿವಿಲ್ಲದಂತೆ ನಮ್ಮ ಹೆಸರಿನಲ್ಲಿ ಸಿಮ್ ಪಡೆದು ವಂಚನೆ ಕೃತ್ಯಗಳಿಗೆ ಉಪಯೋಗಿಸುವ ದೊಡ್ಡ ಜಾಲವೇ ಇದೆ. ನಿಮ್ಮ ಹೆಸರಿನಲ್ಲಿ ಸಿಮ್ ಪಡೆದ ನಂತರ, ಅದು ಹಗರಣ ಮತ್ತು ಇತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜನರ ಕೈಗೆ ಹೋಗುತ್ತದೆ.

 

ಏನಾದರೂ ತಪ್ಪಾದಲ್ಲಿ ಮತ್ತು ಪೊಲೀಸರು ಅಪರಾಧಿಯನ್ನು ಹಿಡಿದರೆ, ಪೊಲೀಸರು ನಿಮ್ಮನ್ನು ಗುರುತಿಸುತ್ತಾರೆ ಏಕೆಂದರೆ ಅವರ ಸಿಮ್ ನಿಮ್ಮ ಹೆಸರಿನಲ್ಲಿ ನೋಂದಾಯಿಸಲ್ಪತ್ತಿರುತ್ತದೆ ಮತ್ತು ಯಾವುದೇ ಕಾರಣವಿಲ್ಲದೆ ನಿಮಗೆ ಶಿಕ್ಷೆಯಾಗುವೆ ಸಾಧ್ಯತೆ ಹೆಚ್ಚಿರುತ್ತದೆ .

 

ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ಹೆಸರಿನಲ್ಲಿರುವ ಸಿಮ್‌ಗಳನ್ನು ಪರಿಶೀಲಿಸಬೇಕು. 'ಸಂಚಾರ್ ಸಾಥಿ' ಎಂಬ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಇದೆ. ಸಂಚಾರ ಸಾಥಿಯಲ್ಲಿ ಪರಿಶೀಲಿಸುವುದರ ಮೂಲಕ ನೀವು ಈಗ ಸಿಮ್ ಕಳ್ಳನನ್ನು ಕಂಡುಹಿಡಿತಬಹುದು. ಸಿಮ್ ಕಳ್ಳತನದ ಬಗ್ಗೆ ತಿಳಿದುಕೊಳ್ಳಿ, ಟ್ರ್ಯಾಕ್ ಮಾಡಿ, ವರದಿ ಮಾಡಿ ಹಾಗೂ ಸುರಕ್ಷಿತವಾಗಿರಿ.

 

ಕಂಡುಹಿಡಿಯುವುದು ಹೇಗೆ? ಈ ಸೂಚನೆಗಳನ್ನು ಅನುಸರಿಸಿ:

ಮೊದಲು 'ಸಂಚಾರ ಸಾಥಿ(sanchar saathi)' ಆಪ್ ಅಥವಾ ವೆಬ್ ಸೈಟ್ ಗೆ ಲಾಗಿನ್ ಆಗಿ.

ಅಲ್ಲಿ 'ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ' ಎನ್ನುವ ಆಯ್ಕೆಯನ್ನು ಆರಿಸಿ ಮತ್ತು ಕ್ಲಿಕ್ ಮಾಡಿ.

ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಕೇಳಿರುವ ವಿವರಗಳನ್ನು ಹಾಕಿ.

ಅಷ್ಟೇ, ನಿಮ್ಮ ಐಡಿ ಜೊತೆ ಲಿಂಕ್ ಆಗಿರುವ ಎಲ್ಲಾ ಮೊಬೈಲ್ ನಂಬರ್ ಗಳನ್ನು ಅಲ್ಲಿ ತೋರಿಸಿರುತ್ತೆ.

 

ಹೀಗೆ ಮಾಡುವುದರಿಂದ ನಿಮ್ಮ ಐಡಿ ಕಾರ್ಡ ನಲ್ಲಿ ಎಷ್ಟು ನಂಬರ್ ಗಳು ರಿಜಿಸ್ಟರ್ ಆಗಿವೆ ಎಂದು ತಿಳಿಯಬಹುದು ಮತ್ತು ನೀವು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.