ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆ ಪರಿಣಾಮದಿಂದಾಗಿ, ಎರಡೇ ವರ್ಷದಲ್ಲಿ ಉಚಿತ ಬಸ್ಸುಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 500 ಕೋಟಿಗೆ ತಲುಪಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಸಾಧನೆಗೆ ಗುರುತಿನ ಪ್ರತಿಯಾಗಿ, 500 ಕೋಟಿ ಟಿಕೆಟ್ ಪಡೆಯಲಿರುವ ಮಹಿಳೆಗೆ ವಿಶೇಷ ಲಕ್ಕಿ ಬಹುಮಾನ ನೀಡಲಾಗುತ್ತಿದೆ. ರಾಜ್ಯಾದ್ಯಾಂತ ಈ ಯೋಜನೆಯು ಮಹಿಳೆಯರ ದೈನಂದಿನ ಬದುಕಿಗೆ ಅನುಕೂಲವಾಗಿದ್ದು, ಸರ್ಕಾರದ ಮಹಿಳಾ ಕೇಂದ್ರಿತ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದ 2 ವರ್ಷಗಳಲ್ಲಿ ಈ ಅಂಕಿ-ಅಂಶ ದಾಖಲೆಯೆಂದು ಸಚಿವರು ಹೇಳಿದರು.