ವಾಸ್ತು tips : ವಾಸ್ತು ಶಾಸ್ತ್ರದ ಪ್ರಕಾರ ಯಾವೆಲ್ಲಾ ವಸ್ತುಗಳು ನಿಮ್ಮ ಮನೆ ಅಥವಾ ಕಟ್ಟಡ ಕಟ್ಟುವ ಸ್ಥಳದಲ್ಲಿ ಸಿಗಬಾರದು?

  • 22 Feb 2025 02:48:06 PM

ವಾಸ್ತು tips : ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ವಾಸ್ತು ಶಾಸ್ತ್ರ ಈ ಎಲ್ಲಾ ಆರೋಗ್ಯ ಮತ್ತು ಕಲ್ಯಾಣ ಮನೆಯಲ್ಲಿ ನೆಲೆಸಲು ಪ್ರಮುಖ ಪಾತ್ರವಹಿಸುತ್ತದೆ. ಪ್ರಾಚೀನ ವಾಸ್ತು ತತ್ತ್ವಗಳ ಪ್ರಕಾರ, ಮನೆ ಅಥವಾ ಕಟ್ಟಡ ನಿರ್ಮಿಸುವ ಮೊದಲು ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ.

 

ತಪ್ಪು ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ, ಅದು ಮನೆ ಮಂದಿಗೆ ಆರ್ಥಿಕ, ಅರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತು ದೋಷಗಳ ಪರಿಣಾಮ ಕಡಿಮೆಗೊಳಿಸಲು, ಮನೆಯಲ್ಲಿ ಅನುಕೂಲಕರವಾದ ಶಕ್ತಿಗಳನ್ನು ಆಕರ್ಷಿಸಲು, ಮತ್ತು ದೈಹಿಕ-ಮಾನಸಿಕ ಸುಖಪ್ರದ ಜೀವನವನ್ನು ನಡೆಸಲು, ಕೆಲವು ವಸ್ತುಗಳು ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಇರಬಾರದು. ಈ ವಸ್ತುಗಳು ಅನಾವಶ್ಯಕ ಕಠಿಣತೆ, ಮನಸ್ಸಿನ ಅಶಾಂತಿ, ಹಾಗೂ ಅಹಿತಕರ ಪರಿಣಾಮಗಳನ್ನು ಉಂಟುಮಾಡಬಹುದು.

 

ಆದ್ದರಿಂದ ಮನೆ ಕಟ್ಟುವಾಗ ವಾಸ್ತುವಿನ ಬಗ್ಗೆ ಕಾಳಜಿ ವಹಿಸಿದರೆ ಒಳ್ಳೆಯದು. ಹಿಂದೂ ಶಾಸ್ತ್ರದ ವಾಸ್ತುವಿನ ಪ್ರಕಾರ ಮನೆ ಅಥವಾ ಕಟ್ಟಡ ಕಟ್ಟುವಾಗ ದಿಕ್ಕುಗಳನ್ನು ಎಷ್ಟು ಸರಿಯಾಗಿ ಸಮತೋಲನ ಮಾಡಿ ಕಟ್ಟಬೇಕೋ ಅಷ್ಟೇ ಮುಖ್ಯವಾಗಿ ಇನ್ನಿತರ ಹಲವಾರು ವಿಷಯಗಳನ್ನು ಗಮದಲ್ಲಿ ಇಟ್ಟುಕೊಂಡು ಕಟ್ಟಿದರೆ ಮನೆಯಲ್ಲಿ ಪ್ರತಿಯೊಬ್ಬರ ಅಭಿವೃದ್ಧಿ ಆಗುವುದರ ಜೊತೆಗೆ ಸಮಾಜದಲ್ಲೂ ಒಳ್ಳೆಯ ಸ್ಥಾನಮಾನ ಗಿಟ್ಟಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರದ ಪಂಡಿತರುಗಳು. 

 

ನಿಮ್ಮ ಮನೆ ಅಥವಾ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಈ ಕೆಳಗಿನ ವಸ್ತುಗಳು ಇರಬಾರದು:

ಹಾವಿನ ಹುತ್ತ ಇರಬಾರದು - ಹಾವಿನ ಹುತ್ತವಿರುವುದರಿಂದ ಆ ಸ್ಥಳದಲ್ಲಿ ಹಾವಿನ ಸಂಚಾರ ಇರಬಹುದು ಮತ್ತು ಅದು ಅಪಾಯಕಾರಿ.

ಗೆದ್ದಲು ಇರಬಾರದು - ನಿಮ್ಮ ಮನೆ ಕಟ್ಟುವ ಸ್ಥಳದಲ್ಲಿ ಗೆದ್ದಲುಗಳು ಅತಿಯಾಗಿ ಇದ್ದರೆ ಅವುಗಳು ಭೂಮಿಯನ್ನು ಮೃದುವನ್ನಾಗಿಸುತ್ತದೆ. ಆದ್ದರಿಂದ ಗೆದ್ದಲು ಮನೆ ಕಟ್ಟುವ ಸ್ಥಳದಲ್ಲಿ ಇದ್ದರೆ ಆ ಭೂಮಿ ಅಷ್ಟು ಯೋಗ್ಯವಲ್ಲ ಎನ್ನುತ್ತಾರೆ ವಾಸ್ತು ಪಂಡಿತರು.

ಇರುವೆ ಗೂಡುಗಳು ಕೂಡ ಇರಬಾರದು - ಇರುವೆ ಗೂಡುಗಳು ಸಹ ಮನೆ ಕಟ್ಟುವ ಸ್ಥಳಗಳಲ್ಲಿ ಇರಬಾರದಂತೆ. ಇರುವೆ ಗೂಡುಗಳು ಇರುವ ಜಾಗಗಳು ಸೂಕ್ತವಲ್ಲ ಎನ್ನುತ್ತಾರೆ.

ಹಳೆಯ ಬಟ್ಟೆ ಸಿಗಬಾರದು - ಹಳೆಯ ಬಟ್ಟೆಗಳು ಸಿಕ್ಕಿದರೆ ಅದು ಕೂಡ ಒಳ್ಳೆಯ ಸಂಕೇತವಲ್ಲ. ಹಳೆಯ ಬಟ್ಟೆ ನಾನಾ ಕಾರಣಗಳಿಂದ ಆ ಸ್ಥಳದಲ್ಲಿ ಇರುವ ಸಾಧ್ಯತೆ ಇದೆ.

ಮೂಳೆಗಳು ಸಿಗಬಾರದು - ಮೂಳೆಗಳು ಸಹ ಬಹಳಷ್ಟು ಕಾರಣಗಳಿಂದ ಆ ಸ್ಥಳದಲ್ಲಿ ಬಂದಿರಬಹುದು ಅಥವಾ ಆ ಸ್ಥಳ ಯಾವುದೋ ವಿದ್ವಾಂಸಕ ಕೃತ್ಯ ಅಥವಾ ದಫನಕ್ಕೆ ಉಪಯೋಗಿಸಿರಬಹುದು.

ಸುಟ್ಟು ಹೋದ ಮರ ಅಥವಾ ಇದ್ದಿಲು - ಯಾವುದೇ ಮಾಟ ಮಂತ್ರ ಮಾಡಿದ ಸ್ಥಳ ಕೂಡ ಇದಾಗಿರಬಹುದು. ಆದ್ದರಿಂದ ಇದು ಕೂಡ ಸೂಕ್ತವಲ್ಲ.

ಬೂದಿ ಸಿಗಬಾರದು - ಆ ಸ್ಥಳ ಹಿಂದಿನ ಕಾಲದಲ್ಲಿ ಸ್ಮಶಾನಕ್ಕೆ ಉಪಯೋಗಿಸಿರುವ ಸಾಧ್ಯತೆ ಹೆಚ್ಚು. ಆದ್ದರಿಂದ ಬೂದಿ ಸಿಕ್ಕಿದ ಸ್ಥಳ ಮನೆ ಕಟ್ಟಲು ಉತ್ತಮವಲ್ಲ.

ಕಬ್ಬಿಣದ ಚೂರು ಅಥವಾ ಕಬ್ಬಿಣದ ತುಂಡು - ಕಬ್ಬಿಣ ಚೂರು ಅಥವಾ ಕಬ್ಬಿಣದ ತುಂಡು ಸಿಕ್ಕಿದರು ಮನೆ ಕಟ್ಟಲು ಉತ್ತಮವಲ್ಲ ಎನ್ನುತ್ತಾರೆ ವಾಸ್ತು ತಜ್ಞರುಗಳು.

ಕೂದಲು - ಕೂದಲು ಸಿಕ್ಕಿದರೆ ಅದು ತುಂಬಾ ದರಿದ್ರ ಸ್ಥಳವಾಗಿರುತ್ತದೆ. ಯಾವುದೋ ಅನಾಚಾರ ಕೆಲಸ ಆಗಿರುವ ಸಂಕೇತ ಕೂದಲು ಸಿಗುವುದಾಗಿರುತ್ತದೆ. ಅಂತ ಸ್ಥಳ ತುಂಬಾ ನೆಗೆಟಿವಿಟಿಯಿಂದ ಕೂಡಿರುತ್ತದೆ. 

 

ತಮ್ಮ ಮನೆ ಕಟ್ಟುವ ಸ್ಥಳದಲ್ಲಿ ಸರಿಸುಮಾರು ನಾಲ್ಕರಿಂದ ನಾಲ್ಕೂವರೆ ಅಡಿಗಿಂತ ಕೆಳಗೆ ಈ ರೀತಿಯಾದ ವಸ್ತುಗಳು ಕಾಣಿಸಿದರೆ ಅದರ ದೋಷ ಇರೋದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು. ಆದ್ದರಿಂದ ಮೇಲೆ ನಮೂದಿಸಿದ ಯಾವುದೇ ವಸ್ತುಗಳು ನೀವು ಮನೆ ಕಟ್ಟುವ ಸ್ಥಳದಲ್ಲಿ ಸಿಕ್ಕಿದರೆ ಅದಕ್ಕೆ ಸರಿಯಾದ ಪರಿಹಾರ ನಡೆಸಿ ಮುಂದುವರಿದರೆ ತುಂಬಾ ಉತ್ತಮ.

 

ಈಗಿನ ಆಧುನಿಕ ಕಾಲದಲ್ಲಿ ವಾಸ್ತುವಿನ ಎಲ್ಲಾ ನಿಯಮಗಳನ್ನು ಪಾಲಿಸಲು ಅಸಾಧ್ಯ. ಆದರೆ ವಾಸ್ತು ತಜ್ಞರು ಮತ್ತು ಜೋತಿಷ್ಯರುಗಳು ಹೇಳುವ ಪ್ರಕಾರ ಸರಿಯಾದ ವಿಧಿ ವಿಧಾನಗಳಿಂದ ಮಧ್ಯಮ ವರ್ಗಕ್ಕೆ ಸೇರಿದ ಸ್ಥಳಗಳನ್ನು ಮನೆ ಕಟ್ಟಲು ಯೋಗ್ಯವಾಗುವ ಸ್ಥಳವಾಗಿ ಮಾರ್ಪಡಿಸಬಹುದು ಎಂದು ಹೇಳುತ್ತಾರೆ.