ಕೇರಳದ ಕೆಲ ಶಾಲೆಗಳು ಇತ್ತೀಚೆಗೆ ಹೊಸ ರೀತಿಯ ಆಸನ ವ್ಯವಸ್ಥೆ ಪರಿಚಯಿಸಿ ದೇಶದ ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ದೂರವನ್ನು ಕಡಿಮೆ ಮಾಡುವ ಹಾಗೂ ತರಗತಿಯೊಳಗಿನ ಸಂವಹನವನ್ನು ಹೆಚ್ಚು ಸಮಾನಗೊಳಿಸುವ ನಿಟ್ಟಿನಲ್ಲಿ ಈ ನವೀನ ಕ್ರಮ ಕೈಗೊಳ್ಳಲಾಗಿದೆ.
ವಿಷೇಷವೆಂದರೆ, ಈ ಹೊಸ ಆಸನ ವ್ಯವಸ್ಥೆಗೆ ಪ್ರೇರಣೆಯು 2024ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ ‘ಸ್ಥಾನಾರ್ಥಿ ಶ್ರೀಕುಟ್ಟನ್’ನಿಂದ ಲಭಿಸಿದೆ. ಈ ಚಿತ್ರದಲ್ಲಿ ತೋರಿಸಿದ ಅರ್ಧ ವೃತ್ತಾಕಾರದ ಕ್ಲಾಸ್‌ರೂಂ ವ್ಯವಸ್ಥೆಯೇ ಈಗ ನೈಜ ಜೀವನದಲ್ಲೂ ನವೀನ ಪ್ರಯೋಗವಾಗುತ್ತಿದೆ.
ಈ ವಿಧಾನದಲ್ಲಿ ಶಿಕ್ಷಕರಿಗೆ ಎಲ್ಲರ ಮುಖವೂ ಸ್ಪಷ್ಟವಾಗಿ ಕಾಣುತ್ತದೆ, ಮತ್ತು ವಿದ್ಯಾರ್ಥಿಗಳೂ ತಮ್ಮ ಪರಸ್ಪರ ಸಂವಾದದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಈ ವ್ಯವಸ್ಥೆಯ ಮತ್ತೊಂದು ಉದ್ದೇಶ, "ಫ್ರಂಟ್ ಬೆಂಚರ್" ಮತ್ತು "ಬ್ಯಾಕ್ ಬೆಂಚರ್" ಎಂಬ ವಿಚ್ಛೇದನಗಳನ್ನು ಕೊನೆಗೊಳಿಸುವುದಾಗಿದೆ.