ಮಂಗಳೂರು: 2025 ರ ಓಪನ್ ಸ್ಟ್ರೀಟ್ ಮ್ಯಾಪ್ (Open Street Map) ನ ಜನಸಂಖ್ಯೆ ಅಂದಾಜಿನ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳು ವೇಗವಾಗಿ ಬೆಳೆಯುತ್ತಿರುವ ನಗರೀಕರಣದ ಫಲಿತಾಂಶವಾಗಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆಯ ಹೆಚ್ಚಳ ಕಂಡುಬರುತ್ತಿದೆ. ಈ ಪಟ್ಟಿಯು ಪ್ರತ್ಯೇಕ ನಗರಗಳ ಅಂದಾಜು ಜನಸಂಖ್ಯೆಯ ವಿವರಗಳನ್ನು ಒಳಗೊಂಡಿದೆ:
1. ಬೆಂಗಳೂರು – ರಾಜ್ಯದ ರಾಜಧಾನಿ ಬೆಂಗಳೂರು, ತಂತ್ರಜ್ಞಾನ ಮತ್ತು ಉದ್ಯಮದ ಪ್ರಮುಖ ಕೇಂದ್ರವಾಗಿದ್ದು, ಅಂದಾಜು 144.3 ಲಕ್ಷ ಜನರನ್ನು ಹೊಂದಿದೆ. ಇದು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದು.
2. ಮೈಸೂರು – ಇತಿಹಾಸ ಪ್ರಸಿದ್ಧ ನಗರವಾಗಿ ಗುರುತಿಸಲ್ಪಡುವ ಮೈಸೂರು, ಸಾಂಸ್ಕೃತಿಕ ವೈಭವದೊಂದಿಗೆ 18.28 ಲಕ್ಷ ಜನರನ್ನು ಹೊಂದಿರುವ ನಗರವಾಗಿದೆ.
3. ಹುಬ್ಬಳ್ಳಿ-ಧಾರವಾಡ – ಈ ನಗರಗಳು ಒಟ್ಟಾರೆ 14.67 ಲಕ್ಷ ಜನಸಂಖ್ಯೆಯನ್ನು ಹೊಂದಿವೆ.
4. ಮಂಗಳೂರು – ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ನಗರವಾದ ಮಂಗಳೂರು, 11.67 ಲಕ್ಷ ಜನರ ಅಂದಾಜು ಜನಸಂಖ್ಯೆಯೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ.
5. ಬೆಳಗಾವಿ – ಕರ್ನಾಟಕದ ಉತ್ತರ ಭಾಗದಲ್ಲಿರುವ ಬೆಳಗಾವಿ, 10.3 ಲಕ್ಷ ಜನರ ಅಂದಾಜು ಜನಸಂಖ್ಯೆ ಹೊಂದಿರುವ ಪ್ರಮುಖ ನಗರವಾಗಿದೆ.
6. ದಾವಣಗೆರೆ-ಹರಿಹರ – ಕೃಷಿ ಮತ್ತು ಉದ್ಯಮದ ಕೇಂದ್ರವಿರುವ ಈ ನಗರಗಳು 9.03 ಲಕ್ಷ ಜನರನ್ನು ಹೊಂದಿವೆ.
7. ಕಲಬುರಗಿ – ಹೈದ್ರಾಬಾದ್ ಕರ್ನಾಟಕದ ಪ್ರಮುಖ ನಗರವಾದ ಕಲಬುರಗಿ, 8.02 ಲಕ್ಷ ಜನರನ್ನು ಹೊಂದಿದೆ.
8. ಶಿವಮೊಗ್ಗ-ಭದ್ರಾವತಿ – ಮಲೆನಾಡು ಭಾಗದಲ್ಲಿರುವ ಈ ನಗರಗಳು ಒಟ್ಟಾಗಿ 7.91 ಲಕ್ಷ ಜನಸಂಖ್ಯೆಯನ್ನು ಹೊಂದಿವೆ.
ಮುಂದಿನ ವರ್ಷಗಳಲ್ಲಿ ಈ ನಗರಗಳ ಜನಸಂಖ್ಯೆ ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ, ಇದರೊಂದಿಗೆ ನಗರ ಯೋಜನೆ ಮತ್ತು ಮೂಲಸೌಕರ್ಯದ ಅಗತ್ಯವೂ ಹೆಚ್ಚಾಗಲಿದೆ.