ಮಂಗಳೂರು: ವಿದ್ಯಾರ್ಥಿಗಳಲ್ಲಿ ಶ್ರಮ, ಶಿಸ್ತು ಮತ್ತು ದೃಢತೆಯೊಂದಿದ್ದರೆ ಸಾಧನೆಯ ಹಾದಿ ಸುಗಮವಾಗಲಿದೆ ಎನ್ನುವುದಕ್ಕೆ ಇತೀಚೆಗೆ ತೀರ್ಥಹಳ್ಳಿಯ ಮಂಗಳೂರು ಮೂಲದ ಯೆಯ್ಯಾಡಿ ವ್ಯಾಸನಗರ ನಿವಾಸಿ ಸುರೇಶ ಹಾಗೂ ಗೀತಾ ದಂಪತಿಗಳ ಪುತ್ರಿ ರಿತುಪರ್ಣ ಕೆ.ಎಸ್ ರವರು ವಿಶ್ವದ ಪ್ರಮುಖ ಕಂಪನಿಯಾಗಿರುವ Rolls-Royce ಕಂಪನಿಯಿಂದ ಉದ್ಯೋಗಕ್ಕೆ ಆಯ್ಕೆಯಾಗಿರುವುದು.
ಕರ್ನಾಟಕದ ಮಂಗಳೂರು ಮೂಲದ ರಿತುಪರ್ಣ ಕೆ.ಎಸ್. ಅವರು ತಮ್ಮ ಪ್ರಯತ್ನ ಮತ್ತು ಧೈರ್ಯದಿಂದ ಅಪರೂಪದ ಸಾಧನೆ ಮಾಡಿರುವ ವಿದ್ಯಾರ್ಥಿನಿ. ವೈದ್ಯೆಯಾಗುವ ಕನಸಿಗೆ NEET ಪರೀಕ್ಷೆಯಲ್ಲಿ ಅಸ್ವೀಕೃತರಾದರೂ, ಅವರು ಹೊತ್ತಿದ್ದು ಮತ್ತೊಂದು ದಿಟ್ಟ ಮಾರ್ಗವನ್ನು – ಎಂಜಿನಿಯರಿಂಗ್ ಕ್ಷೇತ್ರ.
ರಿತುಪರ್ಣ ಅವರು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ Robotics and Automation ವಿಭಾಗದಲ್ಲಿ 6ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾರೆ. ವೈದ್ಯಕೀಯ ಪ್ರವೇಶ ವಿಫಲವಾದ ನಂತರ, ಅವರು ತಾಂತ್ರಿಕ ಶಿಕ್ಷಣದತ್ತ ಮುಖಮಾಡಿ ತಮ್ಮ ಆಸಕ್ತಿಯನ್ನು Robotics ಕ್ಷೇತ್ರದಲ್ಲಿ ರೂಪಿಸಿಕೊಂಡರು.
Rolls-Royce ಕಂಪನಿಯಿಂದ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ವಾರ್ಷಿಕ ₹72.3 ಲಕ್ಷ ಪ್ಯಾಕೇಜ್ ಇರುವ ಕೆಲಸ ನೀಡಲಾಗಿದೆ. Rolls-Royce ನಲ್ಲಿ ಇಂಟರ್ನ್‌ಶಿಪ್‌ಗಾಗಿ ಮೊದಲಿಗೆ ಅರ್ಜಿ ಹಾಕಿದರೂ ಆಯ್ಕೆಯಾಗಲಿಲ್ಲ. ಆದರೆ ಹಿಂತಿರುಗದೆ, ಅವರು ಎಂಟು ತಿಂಗಳ ಕಾಲ ನಾನಾ ಹಂತಗಳ ಇಂಟರ್‌ವ್ಯೂ, ಟೆಕ್ನಿಕಲ್ ಟೆಸ್ಟ್‌ಗಳಲ್ಲಿ ಪಾಲ್ಗೊಂಡು ಕೊನೆಗೆ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು.
ಕಾಲೇಜಿನ ಮೊದಲ ವರ್ಷದಲ್ಲೇ ಅವರು ಹವಾಮಾನ-ಆಧಾರಿತ ಯಂತ್ರವೊಂದನ್ನು ರಚಿಸಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದರು. ಅಲ್ಲದೆ ನಗರ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಮೊಬೈಲ್ ಆಪ್ ಕೂಡ ಅಭಿವೃದ್ಧಿಪಡಿಸಿದ್ದರು.