24 July 2025 | Join group

ವಿಶ್ವದಲ್ಲೇ ಡಿಜಿಟಲ್ ಪೇಮೆಂಟ್ ವಹಿವಾಟಿನಲ್ಲಿ ಭಾರತ ಮುಂಚೂಣಿ

  • 15 Jul 2025 02:00:08 PM

ನವದೆಹಲಿ: ಭಾರತದ ಯುಪಿಈ ಈಗ ವಿಶ್ವದ ನಂಬರ್ ಒನ್ ನೈಜ ಸಮಯದ ಪಾವತಿ ವ್ಯವಸ್ಥೆಯಾಗಿದೆ. ಇದು ಭಾರತದಲ್ಲಿನ ಎಲ್ಲಾ ಡಿಜಿಟಲ್ ವಹಿವಾಟುಗಳಲ್ಲಿ 85% ಅನ್ನು ಸಕ್ರಿಯಗೊಳಿಸುತ್ತದೆ. ಸದ್ಯದ ಸರಕಾರದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 65 ಕೋಟಿ ಜನ ಯುಪಿಐ ಆಧಾರಿತ ಮೊಬೈಲ್ ಪೇಮೆಂಟ್ ನಡೆಸುತ್ತಾರೆ ಎಂದು ತಿಳಿಸಲಾಗಿದೆ.

 

ಯುಪಿಐ ಆಧಾರಿತ ಡಿಜಿಟಲ್ ವಹಿವಾಟುಗಳು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡಿರುವ ಕಾರಣ ವಿಶ್ವದ ಇತರೆ ದೇಶಗಳಿಗಿಂತ ಭಾರತ ತ್ವರಿತಗತಿಯಲ್ಲಿ ಹಣಕಾಸು ಪಾವತಿ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ವರದಿ ತಿಳಿಸಿದೆ.

 

2016ರಲ್ಲಿ ಆರಂಭವಾದ ಯುಪಿಐ ಅತೀ ಕಡಿಮೆ ಸಮಯದಲ್ಲಿ ವೇಗವಾಗಿ ಬೆಳೆದಿದೆ. ಯುಪಿಐನಿಂದ ಪ್ರತಿ ತಿಂಗಳು 18 ಬಿಲಿಯನ್ ನಷ್ಟು ಹಣಕಾಸು ವಹಿವಾಟು ಭಾರತದಲ್ಲಿ ನಡೆಯುತ್ತಿದೆ.

 

ಇದರಿಂದಾಗಿ ನಗದು ಬಳಕೆ ಕಡಿಮೆಯಾಗಿದೆ ಎಂದು ತಿಳಿಸಿದೆ. ಭಾರತದಲ್ಲಿ ಸಾರ್ವಜನಿಕರು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳಿಗಿಂತ ಹೆಚ್ಚಾಗಿ ಮೊಬೈಲ್ ಮೂಲಕವೇ ಹಣ ಪಾವತಿ ಮಾಡುತ್ತಾರೆ ಎಂದು ಇನ್ನೊಂದು ವರದಿ ತಿಳಿಸಿದೆ.