24 July 2025 | Join group

ದೇಶದಲ್ಲೇ ಮೊದಲು: ನಿಮ್ಮ ನಂದಿನಿ ಹಾಲು ಇನ್ಮುಂದೆ ಬಯೋಡಿಗ್ರೇಡೆಬಲ್ ಪ್ಯಾಕೆಟ್‌ನಲ್ಲಿ - ಪರಿಸರ ಸ್ನೇಹಿ ಹೆಜ್ಜೆ

  • 19 Jul 2025 12:26:06 PM

ಪರಿಸರ ಸಂರಕ್ಷಣೆಗಾಗಿ ಮಹತ್ವದ ಹೆಜ್ಜೆ ಇಟ್ಟು, ನಂದಿನಿ ಹಾಲು ಇನ್ನು ಮುಂದೆ ಹೊಸದಾದ ರೂಪದಲ್ಲಿ ಗ್ರಾಹಕರ ಕೈ ಸೇರುವ ತಯಾರಿ ನಡೆಸಿದೆ. ಈಗಾಗಲೇ ಮನೆ ಮನೆಗೆ ತಲುಪುತ್ತಿರುವ ಈ ಜನಪ್ರಿಯ ಹಾಲುಬ್ರಾಂಡ್, ಈಗಿನಿಂದ ಪ್ಲಾಸ್ಟಿಕ್ ಬಳಕೆಗೆ ಪ್ರತಿಯಾಗಿ ಬಯೋಡಿಗ್ರೇಡೆಬಲ್ ಪರಿಸರ ಸ್ನೇಹಿ ಪ್ಯಾಕೆಟ್‌ಗಳಲ್ಲಿ ಲಭ್ಯವಾಗಲಿದೆ.

 

ಈ ಅಭಿಯಾನವನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮತ್ತು ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಜಂಟಿಯಾಗಿ ಕೈಗೊಂಡಿದ್ದು, ಇದು ದೇಶದ ಹಾಲು ಉದ್ಯಮದಲ್ಲಿ ಮೊದಲ ಪ್ರಯತ್ನವೆಂದು ಗುರುತಿಸಲಾಗಿದೆ. ಹಾಲು ಉತ್ಪಾದನೆಯಲ್ಲಿಯೂ ಗುಣಮಟ್ಟಕ್ಕೆ ಪ್ರಾಧಾನ್ಯ ನೀಡುತ್ತಿರುವ ನಂದಿನಿ, ಈಗ ಪರಿಸರ ಸಂರಕ್ಷಣೆಯಲ್ಲಿಯೂ ಮುಂದಿಟ್ಟ ಹೆಜ್ಜೆಯಿಂದ ಇತರೆ ಸಂಸ್ಥೆಗಳಿಗೆ ಮಾದರಿಯಾಗಿ ಪರಿಣಮಿಸಿದೆ.

 

ಬಯೋಡಿಗ್ರೇಡೆಬಲ್ ಪ್ಯಾಕೆಟ್‌ಗಳು ಬಳಸಿದ ನಂತರ ಸಹಜವಾಗಿ ವಿಲೀನಗೊಂಡು ಪರಿಸರದಲ್ಲಿ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಬಯೋಡಿಗ್ರೇಡೆಬಲ್ ಪ್ಯಾಕೆಟ್ ಗಳು 6 ತಿಂಗಳ ಒಳಗೆ ಭೂಮಿಯಲ್ಲಿ ಕರಗುತ್ತದೆ.

 

ಇದರಿಂದ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ, ಭೂಮಿಗೆ ಆಗುವ ಹಾನಿಯನ್ನೂ ತಡೆಯಬಹುದು. ಪರಿಸರಪರವಾಗಿ ಚಿಂತಿಸುವ ನಂದಿನಿಯ ಈ ಹೊಸ ರೂಪ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುವುದು ಖಚಿತ.