24 July 2025 | Join group

ಡಾಗ್ ವಾಕರ್ - ನಾಯಿಗಳ ಜೊತೆ ಓಡುತ್ತಾ ತಿಂಗಳಿಗೆ ₹4.5 ಲಕ್ಷ ಗಳಿಸುತ್ತಿರುವ ಮಹಾರಾಷ್ಟ್ರದ ಯುವಕ!

  • 22 Jul 2025 01:05:02 AM

ಮಹಾರಾಷ್ಟ್ರದ ಯುವಕನೊಬ್ಬ ಡಾಗ್‌ ವಾಕರ್‌ (ನಾಯಿಯನ್ನು ನಡೆಸುವುದು) ವೃತ್ತಿಯನ್ನು ಆಯ್ದುಕೊಂಡು, ತಿಂಗಳಿಗೆ ರೂ. 4.5 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿದಿನ 38 ನಾಯಿಗಳನ್ನು ವಾಕ್‌ಗೆ ಕರೆದೊಯ್ಯುವ ಈ ವ್ಯಕ್ತಿ, ತಮ್ಮ ಉದ್ಯೋಗದ ಬಗ್ಗೆ ಹೆಮ್ಮೆ ಹೊಂದಿದ್ದು, ತನ್ನ ಕಷ್ಟಪಟ್ಟು ಗಳಿಸಿರುವ ಯಶಸ್ಸನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

 

ಈ ಡಾಗ್‌ ವಾಕರ್‌ ಪ್ರತಿ ನಾಯಿ ಮಾಲೀಕರಿಂದ ತಿಂಗಳಿಗೆ ₹15,000 ಶುಲ್ಕ ವಸೂಲಿಸುತ್ತಿದ್ದು, ಪ್ರತಿ ನಾಯಿ ದಿನಕ್ಕೆ ಎರಡು ಬಾರಿ ವಾಕ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಈ ಸಂಖ್ಯೆಯ ಆಧಾರದ ಮೇಲೆ ಅವರು ತಿಂಗಳಿಗೆ ಸುಮಾರು ₹4.5 ಲಕ್ಷ ಗಳಿಸುತ್ತಿದ್ದಾರೆ ಎಂದು ಅವರೇ ತಾವೇ ಹೇಳಿಕೊಂಡಿದ್ದಾರೆ.

 

ಆದಷ್ಟು ಮಾತ್ರವಲ್ಲದೆ, ಭಾನುವಾರಗಳಂದು ನಾಯಿಗಳಿಗೆ ಸ್ನಾನ ಮಾಡಿಸುವ ಮೂಲಕ ₹38,000 ವರೆಗೆ ಹೆಚ್ಚುವರಿ ಆದಾಯ ಕೂಡ ಹೊಂದಿದ್ದಾರೆ. ಈ ಎಲ್ಲ ಮಾಹಿತಿ ಅವರ ಸಾಮಾಜಿಕ ಮಾಧ್ಯಮ ವಿಡಿಯೋಗಳ ಮೂಲಕ ಜನತೆಯ ಗಮನ ಸೆಳೆದಿದೆ.

 

ತಮ್ಮ ಎಂ.ಬಿ.ಎ ಪದವಿದಾರನಾದರೂ ತಮ್ಮನಿಗಿಂತ ಹೆಚ್ಚು ಹಣ ಗಳಿಸುತ್ತಿದ್ದಾರೆ ಎಂಬ ವಿಚಾರ ಕೂಡ ಈಗ ಸದ್ದು ಮಾಡುತ್ತಿದೆ. ತಮ್ಮ ಉದ್ಯೋಗವನ್ನು ಗೌರವದಿಂದ ಮಾಡುತ್ತಾ, ಸಮಯಪಾಲನೆ, ಪ್ರಾಮಾಣಿಕತೆ ಮತ್ತು ಶ್ರಮದ ಮೂಲಕ ಅವರು ತನ್ನ ಜೀವನವನ್ನು ರೂಪಿಸಿಕೊಂಡಿದ್ದಾರೆ.

 

ಇವರ ಕಥೆಯು, ಪದವಿ ಅಥವಾ ಬೃಹತ್‌ ಉದ್ಯೋಗ ಇಲ್ಲದಿದ್ದರೂ ಸಹ, ನಿಷ್ಠೆ ಮತ್ತು ದುಡಿಮೆಯಿಂದ ಯಾವುದೇ ವೃತ್ತಿಯನ್ನೂ ಯಶಸ್ವಿಯಾಗಿ ರೂಪಿಸಬಹುದೆಂಬ ಸಂದೇಶವನ್ನು ನೀಡುತ್ತದೆ.