ಮಂಗಳೂರು: ಬೆಲೆ ಏರಿಕೆ ಬಿಸಿ, ಕಾಫಿಗಿಂತ ಬಿಸಿಯಾಗಿದೆ ಎನ್ನುತ್ತಿದ್ದಾರೆ ಕಾಫಿ ಪ್ರಿಯರು. ದಿನಕ್ಕೆ ಮೂರು, ನಾಲ್ಕು ಬಾರಿ ಕಾಫಿ ಕುಡಿಯುವವರು ಇನ್ನು ಒಂದು ಕಪ್ ಕಾಫಿಗೂ ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ಏಕೆಂದರೆ ಈಗಾಗಲೇ ಕಾಫಿ ಬೆಲೆ ಹೆಚ್ಚಾಗಿದೆ. ಒಂದು ಕೆ.ಜಿ ಕಾಫಿ ಪುಡಿಗೆ 800-1200 ರೂ.ಗೆ ಏರಿಕೆಯಾಗಿದೆ.
ಹೌದು, ಕಾಫಿ ಪುಡಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮುಂದಿನ ತಿಂಗಳು ಮತ್ತೆ ಕೆ.ಜಿಗೆ 200 ರೂ.ವರೆಗೂ ಬೆಲೆ ಏರಿಕೆ ಸಾಧ್ಯತೆ ಇದೆ. 2022 ರಲ್ಲಿ ಕೆ.ಜಿಗೆ 300-400 ರೂ. ಇದ್ದ ಕಾಫಿಪುಡಿ ಬೆಲೆ ಇದೀಗ 1200 ರೂ.ವರೆಗೂ ಏರಿಕೆಯಾಗಿದೆ.
ಕಳೆದ ಒಂದೇ ವರ್ಷದಲ್ಲಿ ಕೆ.ಜಿ ಕಾಫಿ ಪುಡಿ ಬೆಲೆ 200 ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಇನ್ನೂ ತಕ್ಷಣವೇ ಕಾಫಿ ಬೆಲೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.





