ಪ್ರಧಾನ ಮಂತ್ರಿ ಮೋದಿಯವರನ್ನು ತನ್ನ ತಂದೆ-ತಾಯಿ ಜೊತೆ ಭೇಟಿಯಾದ ಕ್ಯಾ. ಬೃಜೇಶ್ ಚೌಟ

  • 02 Apr 2025 10:03:53 PM

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ತನ್ನ ಪೋಷಕರ ಜೊತೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. ತನ್ನ ತಂದೆ ಮತ್ತು ತಾಯಿ ಜೊತೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಇವರು ತುಳುನಾಡಿನ ಸಂಸ್ಕೃತಿಯ ಸಂಕೇತವಾಗಿರುವ ಹುಲಿವೇಷದಲ್ಲಿ ಪ್ರಮುಖವಾಗಿರುವ ಹುಲಿ ವೇಷದ ಮುಖವಾಡ, ತುಳುವಿನಲ್ಲಿ 'ಪಿಲಿ ಮಂಡೆ' ಯನ್ನು ಸ್ಮರಣಿಕೆ ರೂಪದಲ್ಲಿ ಪ್ರಧಾನಿಯವರಿಗೆ ನೀಡಿದರು.

ಕ್ಯಾ. ಚೌಟ ಅವರು ತಮ್ಮ ತಂದೆ ಸೇಸಣ್ಣ ಚೌಟ ಹಾಗೂ ತಾಯಿ ಶ್ರೀಮತಿ ಪುಷ್ಪಾ ಚೌಟ ಅವರೊಂದಿಗೆ ನರೇಂದ್ರ ಮೋದಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡಿದ್ದಾರೆ. 

 

ಭೇಟಿಯ ಸಂಧರ್ಭದಲ್ಲಿ, ತುಳುನಾಡಿನ ಕಂಬಳದ ಪೋಟೋ ಫ್ರೇಮ್ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದ ಪ್ರಸಾದವನ್ನು ಕೂಡ ನೀಡುವ ಮೂಲಕ ಈ ಭೇಟಿಯನ್ನು ಸ್ಮರಣೀಯವಾಗಿಸಿಕೊಂಡರು.

"ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ಶ್ರೀ Narendra Modi ಅವರನ್ನು ಇಂದು ಅವರ ಕಚೇರಿಯಲ್ಲಿ ನನ್ನ ಹೆತ್ತವರೊಂದಿಗೆ ಭೇಟಿಯಾದ ಅಪೂರ್ವ ಸಂದರ್ಭ..

ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮತ್ತು ಪಾರ್ಟಿಯ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ ಇಂದು ವಿಶ್ವ ನಾಯಕನ ಜೊತೆ ನಿಲ್ಲುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಅಮೂಲ್ಯವಾದದ್ದು ಮತ್ತು ಇದನ್ನು ವರ್ಣಿಸಲು ಪದಗಳು ಸಾಲದು..

ರಾಜಕೀಯದಲ್ಲಿ ತೊಡಗಿಸುವ ಕನಸನ್ನು ನೆಟ್ಟು ಅದನ್ನು ನನಸಾಗಿಸುವ ಭರವಸೆ ನೀಡಿದ ನಾಯಕರು ಮೋದಿ ಜೀ ಆದ ಕಾರಣ ಈ ಕ್ಷಣ ನನಗೆ ಮತ್ತಷ್ಟು ಹತ್ತಿರವಾಗಿದೆ..

ನಮ್ಮ ತುಳುನಾಡಿನ ಸಂಸ್ಕೃತಿಯ ಸಂಕೇತವಾದ 'ಪಿಲಿ ತ ಮಂಡೆ' ಅವರಿಗೆ ನೀಡಲಾಯಿತು.. ಮೋದಿ ಜೀ ಅವರು ತಮ್ಮ ಮನ್ ಕಿ ಬಾತ್‌ನಲ್ಲಿಯೂ ಈ ವಿಷಯವನ್ನು ಉಲ್ಲೇಖಿಸಿದ್ದರು ಎಂಬುವುದು ವಿಶೇಷ..

ಧನ್ಯೋಸ್ಮಿ...

Bharatiya Janata Party (BJP) BJP Karnataka #NarendraModi" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ

ಈ ಭೇಟಿ ವೇಳೆ ಪ್ರಧಾನಮಂತ್ರಿ ಮೋದಿ ಅವರ ಜೊತೆ ಮಂಗಳೂರು ಭಾಗವನ್ನು ಅಭಿವೃದ್ಧಿ ಪಡಿಸಲು ಬೇಕಾದ ಸಲಹೆ ಮತ್ತು ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು. ಮಂಗಳೂರು ಕೂಡ ಐತಿಹಾಸಿಕ ವ್ಯಾಪಾರ-ವಹಿವಾಟು, ಬಂದರು, , ಶಿಪ್ಪಿಂಗ್ ಬಿಲ್ಡಿಂಗ್, ಮೀನುಗಾರಿಕೆ, ಆಹಾರ ಸಂಸ್ಕರಣೆ ಹೀಗೆ ಹಲವಾರು ವಿಚಾರಗಳಲ್ಲಿ ಮಂಗಳೂರು ಮಿನಿ ಗುಜರಾತ್ ಆಗಿ ಬಹಳ ಹತ್ತಿರದ ಸಾಮ್ಯತೆ ಹೊಂದಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಆ ಮೂಲಕ, ಮಂಗಳೂರನ್ನು ಗುಜರಾತ್ ಮಾದರಿ ಅಭಿವೃದ್ಧಿಪಡಿಸುವುದಕ್ಕೆ ಮೋದಿ ಅವರ ಮಾರ್ಗದರ್ಶನವನ್ನು ಕೋರಿರುವುದಾಗಿ ತಿಳಿಸಿದರು.

ಪ್ರಧಾನ ಮಂತ್ರಿಯನ್ನು ಭೇಟಿಯಾದ ಫೋಟೋ ಕ್ಯಾ. ಬೃಜೇಶ್ ಚೌಟರವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.