ಏ.4 ರಿಂದ ಏ.6 ರವರೆಗೆ ಮಧೂರು ಕ್ಷೇತ್ರಕ್ಕೆ ಮಂಗಳೂರು ಡಿಪೋದಿಂದ ವಿಶೇಷ ಬಸ್ ಸೇವೆ

  • 03 Apr 2025 02:32:07 PM

ಮಂಗಳೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಈಗ ಬ್ರಹ್ಮಕಲಶೋತ್ಸವದ ಸಡಗರ. ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಮಧೂರು ಗಣಪತಿ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.

 

ಮಧೂರು ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಾಧುರಿಗೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ.

 

ದಿನಾಂಕ 04 ಏಪ್ರಿಲ್ ರಿಂದ ಏಪ್ರಿಲ್ 06ರ ವರೆಗೆ ಈ ಸೇವೆ ಲಭ್ಯವಿದೆ ಎಂದು ತಿಳಿಸಲಾಗಿದೆ.

 

ಈ ವಿಶೇಷ ಬಸ್ ಮಂಗಳೂರಿನ ಬಿಜೈನ ಕೆಎಸ್ಸಾರ್ಟಿಸಿ ಡಿಪೋದಿಂದ ಮಾಧುರಿಗೆ ಬೆಳಗ್ಗೆ 10 ಗಂಟೆಗೆ ಮತ್ತು 10.20ಕ್ಕೆ ಹೋರಾಡಲಿದೆ

 

ಅದೇ ರೀತಿ ಮಾಧುರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆ ಹೊರಡಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

ಬಸ್ ಪ್ರಯಾಣ ಮಂಗಳೂರಿಂದ ಮಾಧುರಿಗೆ ಸರಿಸುಮಾರು 1.15 ಗಂಟೆಯಾಗಿರುತ್ತದೆ. ಕಾಸರಗೋಡು ನಗರದಿಂದ ಎಂಟು ಕಿಲೋಮೀಟರು ದೂರಕ್ಕೆ ಮಧೂರು ಗ್ರಾಮವಿದೆ.

 

ಮಧೂರು ಗಣಪತಿ ದೇವರ ದರ್ಶನ ಪಡೆಯುವ ಭಕ್ತರು ಈ ಸದಾವಕಾಶವನ್ನು ಪಡೆಯಬಹುದಾಗಿದೆ.