ಯುದ್ಧ ವಿಮಾನ ಪತನ, ಮದುವೆಗೆ ನಿಶ್ಚಿತಾರ್ಥವಾದ 10 ದಿನಗಳಲ್ಲಿ ಪೈಲಟ್ ವಿಧಿವಶ.

  • 04 Apr 2025 01:49:14 PM

ಗುಜರಾತ್ ಏಪ್ರಿಲ್ 04, 2025: ಸಾವು ಯಾವಾಗ ಬರುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆದರೆ ಜೀವನದಲ್ಲಿ ಉತ್ತುಂಗದ ಶಿಖರಕ್ಕೆ ಏರುತ್ತಿರುವ ಸಂದರ್ಭದಲ್ಲಿ ಅನಿರೀಕ್ಷಿತ ಸಾವು, ಮನೆಮಂದಿಗೆ ಸಿಡಿಲು ಬಡಿದಂತೆ ಆಗಲಿದೆ. ಅದೇ ಆಗಿರೋದು ಗುಜರಾತಿನ ಪೈಲಟ್ ಸಿದ್ದಾರ್ಥ್​ ಕುಟುಂಬಸ್ಥರಿಗೆ. 

 

ಇತ್ತೀಚೆಗಷ್ಟೇ ಗುಜರಾತ್​ನ ಜಾಮ್​ನಗರದಲ್ಲಿ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು. ಓರ್ವ ಪೈಲಟ್ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದರು, ಆದರೆ ದುರಾದೃಷ್ಟವತ್ ಇನ್ನೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ದುರ್ದವಿಕವಾಗಿ, ಅಪಘಾತದಲ್ಲಿ ಸಾವನ್ನಪ್ಪಿದ್ದ ಪೈಲಟ್ ಸಿದ್ದಾರ್ಥ್​ಗೆ ಕೇವಲ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು. ನವೆಂಬರ್​ನಲ್ಲಿ ಮದುವೆ ನಿಶ್ಚಯಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

 

ರೇವಾರಿಯಿಂದ ರಜೆ ಮುಗಿಸಿ ಜಾಮ್ನಗರ ವಾಯುಪಡೆ ನಿಲ್ದಾಣಕ್ಕೆ ಹೋಗಿದ್ದ ಪೈಲಟ್ ಸಿದ್ದಾರ್ಥ್ ಗೆ ಮಾರ್ಚ್ 23 ರಂದು ಅವರ ನಿಶ್ಚಿತಾರ್ಥ ನೆರವೇರಿಸಿದ್ದರು. ಕೇವಲ ಎರಡು ದಿನಗಳ ನಂತರ ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ತಿಳಿದುಬಂದಿದ್ದು, ಸಿದ್ಧಾರ್ಥ್​​ ಕುಟುಂಬ ಈಗ ಶೋಕ ಸಾಗರದಲ್ಲಿ ಮುಳುಗಿದೆ.

 

28 ವರ್ಷದ ಪೈಲಟ್ ಲೆಫ್ಟಿನೆಂಟ್ ಸಿದ್ಧಾರ್ಥ್​​ ಸಾವನ್ನಪ್ಪಿದ್ದಾರೆ. ಅವರು ಕೇವಲ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ಮದುವೆ ನವೆಂಬರ್​ನಲ್ಲಿ ನಿಗದಿಯಾಗಿತ್ತು. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಸಿದ್ಧಾರ್ಥ್ ಅವರ ಕುಟುಂಬದಲ್ಲಿ ಅವರ ವಿವಾಹದ ಸಿದ್ಧತೆಗಳು ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಸಾವಿನ ಸುದ್ದಿ ಬಂದಿದೆ. ಗುಜರಾತ್​ನ ಜಾಮ್​ನಗರದಲ್ಲಿ ತರಬೇತಿ ವೇಳೆ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿತ್ತು.

 

ನಾಗರಿಕರಿಗೆ ಆಗುವ ತೊಂದರೆ ತಪ್ಪಿಸಲು ಹೊಲವೊಂದರಲ್ಲಿ ಲ್ಯಾಂಡ್ ಮಾಡುವ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಅವರ ಸಹ ಪೈಲಟ್ ಸುರಕ್ಷಿತವಾಗಿ ಹೊರಜಿಗಿಯುವಲ್ಲಿ ಯಶಸ್ವಿಯಾಗಿದ್ದು, ಪ್ರಸ್ತುತ ಜಾಮ್‌ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಿದ್ಧಾರ್ಥ್​ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿದ್ದಾರ್ಥ್ ತಂದೆ  ಸುಶೀಲ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ಮುಂದಕ್ಕೆ ಮಾತನಾಡಿ, ಏಪ್ರಿಲ್ 2 ರ ರಾತ್ರಿ ಜಾಗ್ವಾರ್ ವಿಮಾನದಲ್ಲಿ ಹೊರಟಿದ್ದರು. ಅವರ ಜೊತೆ ಒಬ್ಬ ಸಹಚರ ಕೂಡ ಇದ್ದರು. ಈ ಸಮಯದಲ್ಲಿ, ಜಾಗ್ವಾರ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಉಂಟಾಯಿತು. ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಹಲವು ಪ್ರಯತ್ನಗಳನ್ನು ಮಾಡಿದರಾದರು,  ವಿಮಾನವು ಅಪಘಾತಕ್ಕೀಡಾಗುವುದು ಖಚಿತ ಎಂದು ಸ್ಪಷ್ಟವಾಯಿತು. ನಂತರ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್​ ಯಾದವ್ ಮತ್ತು ಅವರ ಸಹ-ಪೈಲಟ್ ವಿಮಾನವು ಜನನಿಬಿಡ ಪ್ರದೇಶಗಳಿಂದ ದೂರವಿರುವ ತೆರೆದ ಮೈದಾನದಲ್ಲಿ ವಿಮಾನವನ್ನು ಕೆಳಗಿಳಿಸಬೇಕೆಂದುಕೊಂಡರು ಆದರೆ ನಂತರ ನಡೆದದ್ದು ದೊಡ್ಡ ದುರಂತ ಎಂದು ತನ್ನ ಭಾವುಕರಾಗಿ ತಿಳಿಸಿದ್ದಾರೆ.

 

ಜಾಮ್‌ನಗರ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಸುವರ್ದಾ ಗ್ರಾಮದಲ್ಲಿ ಬುಧವಾರ ರಾತ್ರಿ 9.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 2016 ರಲ್ಲಿ NDA ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಸಿದ್ಧಾರ್ಥ್​ ಯುದ್ಧ ವಿಮಾನ ಪೈಲಟ್ ಆಗುವ ಮೊದಲು 3 ವರ್ಷಗಳ ಕಠಿಣ ತರಬೇತಿಯನ್ನು ಪಡೆದರು. ಎರಡು ವರ್ಷಗಳ ಸೇವೆಯ ನಂತರ ಅವರಿಗೆ ಫ್ಲೈಟ್ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಸಿದ್ಧಾರ್ಥ್ ಅವರು ತಮ್ಮ ಕುಟುಂಬದ ದೇಶ ಸೇವೆ ಮಾಡುತ್ತಿದ್ದ ನಾಲ್ಕನೇ ತಲೆಮಾರಿನವರು.