ಇಂದಿನ ಕರ್ನಾಟಕದ ಪ್ರಮುಖ ರಾಜ್ಯ ಸುದ್ದಿ – ಲೈವ್ ಅಪ್ಡೇಟ್‌ಗಳು | 30 ಮಾರ್ಚ್ 2026

  • 30 Mar 2026 04:25:23 PM

ಕರ್ನಾಟಕ ರಾಜ್ಯದ ರಾಜಕೀಯ, ಆಡಳಿತ, ಪ್ರಕಟಣೆ, ಮನೋರಂಜನೆ ಹಾಗೂ ಇನ್ನಿತರ ದಿನವಿಡೀಯ ಪ್ರಮುಖ ಅಪ್ಡೇಟ್‌ಗಳು:

ರಾಜಕೀಯ


6:00 PM

ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೆ 3 ಐಪಿಎಲ್ ಟಿಕೆಟ್ ನೀಡಲು ನಿರ್ಧಾರ 

ಕರ್ನಾಟಕ ಶಾಸಕರ ಮನವಿಗೆ ಸ್ಪಂದಿಸಿದ ಸರಕಾರ ಪ್ರತಿ ಶಾಸಕರಿಗೆ 3 ಐಪಿಎಲ್ ಟಿಕೆಟ್ ನೀಡಲು ತೀರ್ಮಾನಿಸಿದೆ. ಡಿಸಿಎಂ ಶಿವಕುಮಾರ್ ಈ ಬಗ್ಗೆ ತಿಳಿಸಿದ್ದಾರೆ.


4:15 PM

ಅಸ್ಸಾಂನಲ್ಲಿ ಬದಲಾವಣೆಯ ಕಾಲ ಬಂದಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಅಸ್ಸಾಂನಲ್ಲಿ ಬದಲಾವಣೆ ಕಾಲ ಬಂದಿದೆ. ಇಡೀ ಅಸ್ಸಾಂ ಹಿಟ್ಲರ್ ಆಡಳಿತದಿಂದ ಮುಕ್ತಿ ಪಡೆಯಲು ಬಯಸಿದೆ. ಈ ಹಿಟ್ಲರ್ ಆಡಳಿತಕ್ಕೆ ನಾವು ಕೊನೆ ಹಾಡಬೇಕಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದಾರೆ.


4:10 PM

ಕಳ್ಳ ಮತಗಳಿಂದ ನನ್ನ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿದ್ದಾರೆ: ಶ್ರೀರಾಮುಲು

ಟಿವಿ9 ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಚಿವ ಶ್ರೀರಾಮುಲು ಈ ಹೇಳಿಕೆ ನೀಡಿದ್ದಾರೆ. ಎಚ್​​ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದೇ ಏಪ್ರಿಲ್ 9ರಂದು ನಡೆಯಲಿದ್ದು, ಆಡಳಿತ ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಭರ್ಜರಿ ಮತ ಪ್ರಚಾರಕ್ಕೆ ಇಳಿದಿದೆ.


4:00 PM

ಬೆಂಗಳೂರು ಹೋಟೆಲ್ ಮಾಲೀಕರಿಗೆ ಹೆಚ್ಚಿನ ಗ್ಯಾಸ್ ವಿತರಣೆಯ ಭರವಸೆ ನೀಡಿದ ಸಚಿವ ಮುನಿಯಪ್ಪ

ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್ ಕೊರತೆಯ ಆತಂಕ ಇರುವ ಕಾರಣದಿಂದ ಹಲವಾರು ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ರಾಜ್ಯ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಗುಡ್​​ ನ್ಯೂಸ್​​ ನೀಡಿದ್ದು, ನಾಳೆ ನಗರದ ಹೋಟೆಲ್‌ಗಳಿಗೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.