ಮಂಗಳೂರು, ಉಡುಪಿ ಮತ್ತು ಕರಾವಳಿಯ ಇನ್ನಿತರ ಭಾಗಗಳ ಪ್ರಮುಖ ನ್ಯೂಸ್ ಅಪ್ಡೇಟ್ಸ್ ಗಳು
11:00 AM | ಮೂಡಬಿದರೆ | ಭೀಕರ ರಸ್ತೆ ಅಪಘಾತ
ಮೂಡಬಿದರೆ ಪೆಟ್ರೋಲ್ ಬಂಕ್ ಬಳಿ ರಸ್ತೆ ಅಪಘಾತ, ತಾಯಿ ಮಗ ಸಾವು
ಮೂಡಬಿದರೆಯಿಂದ ಗಂಟಾಲ್ಕಟ್ಟೆ ಕಡೆಗೆ ತಾಯಿ ಮತ್ತು ಮಗ ತಮ್ಮ ಬೈಕಿನಲ್ಲಿ ಪ್ರಯಾಣಿಸುತ್ತಿರುವಾಗ, ಟ್ರಕ್ ನ ಹಿಂಭಾಗಕೆ ಡಿಕ್ಕಿ ಹೊಡೆದು ಇಬ್ಬರು ದಾರುಣ ಮೃತಪಟ್ಟಿದ್ದಾರೆ. ಮೃತರನ್ನು ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಮತ್ತು ಅವರ ಪುತ್ರ ಸೀನ ಎಂದು ಗುರುತಿಸಲಾಗಿದೆ.
10:45 AM | ಬೆಳ್ತಂಗಡಿ | ಕಾಡಾನೆ ದಾಳಿ
ಬೆಳ್ತಂಗಡಿಯ ಕೊಕ್ಕಡದಲ್ಲಿ ಕಾಡು ಆನೆ ದಾಳಿ: ನಿವಾಸಿಗಳಲ್ಲಿ ಭಯ
ಮಾರ್ಚ್ 28 ರ ರಾತ್ರಿ, ತೆಂಕುಬೈಲು ಪ್ರದೇಶದಲ್ಲಿ ಯಶವಂತ್ ಅವರ ತೋಟದ ಕೆಲಸಗಾರನಿಗೆ ಸೇರಿದ ನಿಲ್ಲಿಸಿದ್ದ ಮಾರುತಿ ಕಾರಿನ ಮೇಲೆ ಆನೆಯೊಂದು ದಾಳಿ ಮಾಡಿತ್ತು ಮತ್ತು ಮಾರ್ಚ್ 29 ರಂದು ಮುಂಡೂರುಪಾಲಿಕೆಯ ಸಂಕುಬೈಲು ಬಳಿ ಸೇಸಪ್ಪ ಗೌಡ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೂ ಕಾಡು ಆನೆಯೊಂದು ದಾಳಿ ನಡೆಸಿ ಹಾನಿಗೊಳಿಸಿದೆ.
10:15 AM | ಬೆಳ್ತಂಗಡಿ | ವಿದ್ಯಾರ್ಥಿನಿಗೆ ಗಾಯ
ಕೆಎಸ್‌ಆರ್‌ಟಿಸಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿಯರಿಗೆ ಪೆಟ್ಟು
ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ತೆರೆದು ಪರಿಣಾಮ ಇಬ್ಬರು ಸಹೋದರಿ ವಿದ್ಯಾರ್ಥಿನಿಯರು ಹೊರಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ರೇಷ್ಮೆ ರಸ್ತೆಯಲ್ಲಿರುವ ಗೇರುಕಟ್ಟೆ ಯಲ್ಲಿ ನಡೆದಿದೆ. ಗಾಯಾಳುವನ್ನು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಚರಿಷ್ಮಾ ಮತ್ತು ಚಸ್ಮಿಕಾ ಪಿಯುಸಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
9:40 AM | ಮಂಗಳೂರು | ಬಂಧನ
ದೇವಸ್ಥಾನ ಕಳ್ಳತನ ಪ್ರಕರಣ – ತಮಿಳುನಾಡಿನ ವ್ಯಕ್ತಿ ಬಂಧನ
ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ನಿವಾಸಿ ಶಬಿಕ್ ಅಹ್ಮದ್ ಶೇಖ್ ಅಬ್ದುಲ್ ಖಾದರ್ (25) ವ್ಯಕ್ತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಅಂತರರಾಜ್ಯ ಕಳ್ಳತನ ಜಾಲವನ್ನು ಭೇದಿಸಲಾಗಿದೆ.
9:15 AM | ಮಂಗಳೂರು | ಲಾಲ್‌ಬಾಗ್–ಪಿವಿಎಸ್ ಏಕಮುಖ ಸಂಚಾರ ಜಾರಿ
ಎಂಜಿ ರಸ್ತೆಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಲಾಲ್‌ಬಾಗ್‌ನಿಂದ ಪಿವಿಎಸ್‌ವರೆಗೆ ಎರಡು ತಿಂಗಳ ಕಾಲ ಏಕಮುಖ ಸಂಚಾರ ಜಾರಿಗೊಳಿಸಲು ಆದೇಶಿಸಲಾಗಿದೆ.
8:45 AM | ಮಂಗಳೂರು | ಆರೋಪಿಗಳ ಗುರುತು ಪತ್ತೆ
ಆರಿಫ್ ಕೊಲೆ ಪ್ರಕರಣ: 6 ಆರೋಪಿಗಳ ಗುರುತು ಪತ್ತೆ, ಇನ್ನಷ್ಟು ಜನರ ಮೇಲೆ ತನಿಖೆ
ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಮಾರ್ಚ್ 27 ರಂದು ನಡೆದ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಆರು ಆರೋಪಿಗಳ ಗುರುತು ಪತ್ತೆಯಾಗಿದೆ. ಇನ್ನಷ್ಟು ಆರೋಪಿಗಳ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
8:30 AM | ಮಂಗಳೂರು | ಹೊಸ ಯೋಜನೆ
ಕಬಕ–ಪುತ್ತೂರು ಸುಸಜ್ಜಿತ ರೈಲು ನಿಲ್ದಾಣ: ₹2.91 ಕೋಟಿ ಮಂಜೂರು
ರೈಲು ನಿಲ್ದಾಣದಲ್ಲಿ ಶೆಲ್ಟರ್ ನಿರ್ಮಾಣಕ್ಕಾಗಿ ₹2.91 ಕೋಟಿ ಮಂಜೂರು ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.





