ಕರ್ನಾಟಕ ಮತ್ತು ದೇಶದ ರಾಜಕೀಯ, ಆಡಳಿತ, ಪ್ರಕಟಣೆ, ಮನೋರಂಜನೆ ಹಾಗೂ ಇನ್ನಿತರ ದಿನವಿಡೀಯ ಪ್ರಮುಖ ಅಪ್ಡೇಟ್‌ಗಳು:
9:35 AM | ಕರ್ನಾಟಕ | ರಾಜಕೀಯ
ಬಿಜೆಪಿ ಬೆಂಬಲಿಸುವವರೂ ಕೂಡ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು - ಸಿಎಂ ಸಿದ್ದರಾಮಯ್ಯ
ನಿನ್ನೆ ನಡೆದ ಬಾಗಲಕೋಟೆ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತನಾಡಿ, ನಾವು ನೀಡುವ ಗ್ಯಾರಂಟಿಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಕೂಡ ಸೇರಿದ್ದಾರೆ ಎಂದು ಹೇಳುತ್ತಾ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
9:15 AM | ಕರ್ನಾಟಕ | ಬೆಲೆ ಏರಿಕೆಯ ಬಿಸಿ
ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಬೆಲೆ ಏರಿಕೆಗೆ ಸಿದ್ಧತೆ
ವಿದ್ಯುತ್, ನೀರು, ಟೋಲ್‌ಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್ ಕರ್ನಾಟಕದ ಜನತೆಗೆ ಸಿಗಲಿದೆ. ವಿದ್ಯುತ್ ದರ ಪ್ರತಿ ಯೂನಿಟ್ 40-150 ರೂ. ರಷ್ಟು ಏರಿಕೆ.





