02 ಏಪ್ರಿಲ್ 2026 | ಇಂದಿನ ಪ್ರಮುಖ LIVE Updates | ಕರಾವಳಿ – ಕರ್ನಾಟಕ – ರಾಷ್ಟ್ರೀಯ – ಅಂತಾರಾಷ್ಟ್ರೀಯ
7:15 PM | ಬೆಂಗಳೂರು
ಬಿಜೆಪಿ ಆಡಳಿತಾವಧಿಯಲ್ಲಿ ಗುತ್ತಿಗೆದಾರರಿಗೆ ₹29 ಸಾವಿರ ಕೋಟಿ ಬಾಕಿ - ಸಿದ್ದರಾಮಯ್ಯ: ಬಿಜೆಪಿ ಆಡಳಿತಾವಧಿಯಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿದ್ದ ₹29 ಸಾವಿರ ಕೋಟಿಗಳಲ್ಲಿ ಬಹುಪಾಲು ಹಣವನ್ನು ಸರ್ಕಾರ ಪಾವತಿಸಿದೆ ಎಂದು ತಿಳಿದುಬಂದಿದೆ. ಒಟ್ಟು ಬಾಕಿ ಮೊತ್ತದಲ್ಲಿ ₹24 ಸಾವಿರ ಕೋಟಿಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಈ ಕುರಿತು ದಾಖಲೆಗಳ ಆಧಾರದಲ್ಲಿ ಅಧಿವೇಶನದಲ್ಲಿ ಸ್ಪಷ್ಟ ಉತ್ತರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
4:15 PM | ಎತ್ತಿನಹೊಳೆ ಯೋಜನೆ
ಎತ್ತಿನಹೊಳೆ ಯೋಜನೆಗೆ ಕೇಂದ್ರದಿಂದ ತಾತ್ವಿಕ ಹಸಿರು ನಿಶಾನೆ : ಎತ್ತಿನಹೊಳೆ ಯೋಜನೆಗೆ ಮಹತ್ವದ ಮುನ್ನಡೆ ಸಿಕ್ಕಿದೆ. ಹಾಸನ ಹಾಗೂ ತುಮಕೂರು ಜಿಲ್ಲೆಗಳ 277 ಎಕರೆ ಅರಣ್ಯ ಭೂಮಿಯನ್ನು ಬಳಸಲು ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆ, ಇದೀಗ ಕೇಂದ್ರ ಸರ್ಕಾರವೂ ಯೋಜನೆಗೆ ತಾತ್ವಿಕ ಅನುಮೋದನೆ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಇದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
3:00 PM | ನವದೆಹಲಿ/ರಾಜಕೀಯ
ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಉಪನಾಯಕ ಸ್ಥಾನದಲ್ಲಿ ಬದಲಾವಣೆ:ಆಮ್ ಆದ್ಮಿ ಪಕ್ಷ (ಆಪ್) ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಘವ್ ಚಡ್ಡಾ ಅವರನ್ನು ರಾಜ್ಯಸಭೆ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದೆ. ಅವರ ಬದಲು ಅಶೋಕ್ ಮಿತ್ತಲ್ ಅವರಿಗೆ ಜವಾಬ್ದಾರಿ ನೀಡಲು ತೀರ್ಮಾನಿಸಿದೆ. ಈ ಕುರಿತು ರಾಜ್ಯಸಭಾ ಸಚಿವಾಲಯಕ್ಕೆ ಪತ್ರ ಬರೆದಿರುವ ಆಪ್, ರಾಘವ್ ಚಡ್ಡಾ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
2:15 PM | ನವದೆಹಲಿ/ಮಂಗಳೂರು
ಅಡಿಕೆಗೆ ನಿಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ಕ್ಯಾ.ಚೌಟ ಒತ್ತಾಯ: ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಚಿರಾಗ್ ಪಾಸ್ವಾನ್ ಅವರನ್ನು ಭೇಟಿಯಾಗಿ, ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು ಅಡಿಕೆಗೆ ನಗದಿಪಡಿಸಿರುವ ತೇವಾಂಶ ಮಿತಿಯನ್ನು ಸಡಿಲಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿ ಮನವಿ ಸಲ್ಲಿಸಿದರು.
1:30 PM | ವಿಜಯಪುರ
ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರ ಹಾಕುತ್ತೇನೆ - ಯತ್ನಾಳ್ : ನಾನು ಸಿಎಂ ಆಗಿ ಮೊದಲ ಕ್ಯಾಬಿನೆಟ್‌ನಲ್ಲೇ ಮುಸ್ಲಿಂಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ ಮತ್ತು ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಆಡಳಿತ ನಡೆಸುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
12:30 PM | ಬೆಂಗಳೂರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕ ನೀಡುವ ವಿವಾದ, ದೂರು: ಇತ್ತೀಚಿಗೆ ಸರಕಾರ ನಿರ್ಧರಿಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಬಗ್ಗೆ ಪ್ರಶ್ನಿಸಿ ಬೆಂಗಳೂರಿನ ಹೆಚ್.ಎನ್. ಚಂದನಾ ಮತ್ತು ಎಸ್.ವೆಂಕಟೇಶ್ ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಶೈಕ್ಷಣಿಕ ಬದಲಾವಣೆ ಮಾಡುವ ಮುನ್ನ ಶಿಕ್ಷಣ ತಜ್ಞರ ಜೊತೆಯಲ್ಲಿ ಸಭೆ ಮಾಡಬೇಕು. ಆದ್ದರಿಂದ ಅರ್ಜಿಯಲ್ಲಿ ಸರ್ಕಾರದ ಕ್ರಮ ಸರಿಯಾಗಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದುಕೊಳ್ಳದೆ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಮಾಡಿರೋದು ಸೂಕ್ತ ಅಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
11:30 AM | ಬೆಂಗಳೂರು
ಇವಿ ವಾಹನಗಳ ಬೆಲೆ ಏರಿಕೆ : ಕರ್ನಾಟಕದಲ್ಲಿ ಇವಿ ವಾಹನಗಳ ಜೀವಿತಾವಧಿ ತೆರಿಗೆಯನ್ನು ಹೆಚ್ಚಿಸಿದ ಪರಿಣಾಮ ಏಪ್ರಿಲ್ 1 ರಿಂದ ಇವಿ ವಾಹನಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
10:30 AM | ಅಂತಾರಾಷ್ಟ್ರೀಯ
ನಾಸಾ ಆರ್ಟೆಮಿಸ್-II ಚಂದ್ರ ಮಿಷನ್ ಯಶಸ್ವಿ ಉಡಾವಣೆ: ಅಮೆರಿಕದ ಫ್ಲೋರಿಡಾದಿಂದ ನಾಸಾ ಸಂಸ್ಥೆಯ ಆರ್ಟೆಮಿಸ್-II ಮಿಷನ್ ಯಶಸ್ವಿಯಾಗಿ ಉಡಾಯಿಸಲಾಗಿದೆ. ನಾಲ್ವರು ಅಂತರಿಕ್ಷ ಯಾತ್ರಿಗಳು ಚಂದ್ರನ ಸುತ್ತ ಪ್ರಯಾಣ ಕೈಗೊಳ್ಳಲಿದ್ದಾರೆ.
50 ವರ್ಷಗಳ ಬಳಿಕ ಮಾನವರು ಭೂಮಿಯ ಕಡಿಮೆ ಕಕ್ಷೆಯನ್ನು ಮೀರಿ ಪ್ರಯಾಣಿಸುತ್ತಿರುವುದು ವಿಶೇಷ. ಈ ಮಿಷನ್ ಚಂದ್ರ ಮತ್ತು ಮಂಗಳ ಗ್ರಹದ ಭವಿಷ್ಯದ ಯೋಜನೆಗಳಿಗೆ ಮಹತ್ವದ ಹೆಜ್ಜೆಯಾಗಿದೆ.
10:00 AM | ಅಂತಾರಾಷ್ಟ್ರೀಯ
ಹಾರ್ಮುಜ್ ಜಲಸಂಧಿ ಕುರಿತು ಟ್ರಂಪ್ ಹೇಳಿಕೆ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯ ಮೇಲೆ ಅವಲಂಬಿತ ರಾಷ್ಟ್ರಗಳು ಅದನ್ನು ಸ್ವತಃ ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಮೆರಿಕದ ತೈಲ ಖರೀದಿಸಲು ಸಲಹೆ ನೀಡಿದ ಅವರು, "ಹಾರ್ಮುಜ್ ಜಲಸಂಧಿಯನ್ನು ಕಾಪಾಡುವುದು ಆ ರಾಷ್ಟ್ರಗಳ ಜವಾಬ್ದಾರಿ" ಎಂದು ತಿಳಿಸಿದ್ದಾರೆ.
8:45 AM | ಮಂಗಳೂರು
ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಮತ್ತು ಎಲ್‌ಪಿಜಿ: ಸ್ಥಳೀಯ ಮೀನುಗಾರಿಕಾ ಬಂದರಿನಿಂದ ಕಾರ್ಯನಿರ್ವಹಿಸುವ ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳನ್ನು ನಿರಂತರವಾಗಿ ಪೂರೈಸುವಂತೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅಧಿಕಾರಿಗಳು ಮತ್ತು ತೈಲ ಕಂಪನಿಗಳಿಗೆ ನಿರ್ದೇಶನ ನೀಡಿದ್ದಾರೆ.
8:30 AM | ಬೆಂಗಳೂರು
ಕರ್ನಾಟಕ ಅಬಕಾರಿ ಆದಾಯ ಹೆಚ್ಚಳ: 2025-26 ರ ಅಬಕಾರಿ ಆದಾಯ ಸಂಗ್ರಹದಲ್ಲಿ ಶೇ. 11.94 ರಷ್ಟು ಹೆಚ್ಚಳ ಕಂಡಿದೆ. ಕರ್ನಾಟಕವು ಬಿಯರ್ ಮಾರಾಟದಲ್ಲಿ ತೀವ್ರ ಕುಸಿತದ ಹೊರತಾಗಿಯೂ ಹೆಚ್ಚಳ ಆಗಿರುವ ಬಗ್ಗೆ ವರದಿಯಾಗಿದೆ. ದೀರ್ಘ ಮಳೆ ಮತ್ತು ಪ್ರವಾಹಗಳು ಈ ಹೆಚ್ಚಳಕ್ಕೆ ಕಾರಣವಾಗಿವೆ.
8:00 AM | ಬೆಂಗಳೂರು
2nd ಪಿಯು ಫಲಿತಾಂಶ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 2026 ರಲ್ಲಿ ಬಿಡುಗಡೆಯಾಗಲಿದೆ.





