ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದುಬಿದ್ದ ವಿದ್ಯಾರ್ಥಿನಿ, ಪ್ರಾಣಪಕ್ಷಿ ಹಾರಿ ಹೋಗಿಬಿಟ್ಟಿತ್ತು!

  • 07 Apr 2025 12:13:03 AM

ಮಹಾರಾಷ್ಟ್ರ, April 07, 2025 : ಮಹಾರಾಷ್ಟ್ರದ ಧಾರಾಶಿವ್ ನಗರದಲ್ಲಿ ಕಾಲೇಜು ಕಾರ್ಯಕ್ರಮದಲ್ಲಿ 20 ವರ್ಷದ ವರ್ಷಾ ಖರಾತ್ ಎಂಬ ವಿದ್ಯಾರ್ಥಿನಿ ಭಾಷಣ ಮಾಡುತ್ತಿದ್ದರು. ದುರ್ದೈವವೆಂದರೆ, ವರ್ಷಾ ವೇದಿಕೆ ಮೇಲೆ ಕುಸಿದು ಬಿದ್ದು ಸ್ವಲ್ಪದರಲ್ಲೇ ತನ್ನ ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿ. 

 

ವರ್ಷಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.  ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

 

ಮಹರ್ಷಿ ಗುರುವರ್ಯ ಆರ್.ಜಿ. ಶಿಂಧೆ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ವರ್ಷಾ ಖರಾತ್ ಮರಾಠಿ ಭಾಷೆಯಲ್ಲಿ ಭಾಷಣ ಮಾಡುತ್ತಿದ್ದರು. ವರ್ಷಾರವರ ಭಾಷಣವನ್ನು ಆಲಿಸುತಿದ್ದ ಪ್ರೇಕ್ಷಕರು ನಗುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ವರ್ಷಾ ಅವರ ಮಾತು ನಿಧಾನವಾಗುತ್ತಾ ಮೈಕ್‌ ಇಟ್ಟು ಕುಸಿದು ಬಿದ್ದರು. ಕೂಡಲೇ ಪ್ರೇಕ್ಷಕರು ಆಕೆಯ ಸಹಾಯಕ್ಕೆ ಧಾವಿಸಿ ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

 

ತನ್ನ 8ನೇ ವಯಸಿನಲ್ಲಿ ವರ್ಷಾ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಂತೆ, ಆದರೆ ಕಳೆದ ಹನ್ನೆರಡು ವರ್ಷಗಳಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಿರಲಿಲ್ಲ ಮತ್ತು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ವರದಿಯಾಗಿದೆ. 

 

ಯುವಜನತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ನಾವು ದಿನನಿತ್ಯ ಕೇಳುತ್ತಿದ್ದೇವೆ. ಜೀವನಶೈಲಿ ಮತ್ತು ಆರೋಗ್ಯದ ನಿರ್ಲಕ್ಷ ಹೃದಯಘಾತಕ್ಕೆ ದೊಡ್ಡ ಕಾರಣವೆಂದು ಡಾಕ್ಟರ್ ಗಳು ಹೇಳುತ್ತಲೇ ಇರುತ್ತಾರೆ. ಆರೋಗ್ಯದ ಬಗ್ಗೆ ತುಂಬಾ ಎಚ್ಚರ ವಹಿಸುವುದು ಬಹಳ ಪ್ರಾಮುಖ್ಯ.