ನವದೆಹಲಿ: ಏಪ್ರಿಲ್ 4 ರಂದು ನಡೆದ ಪಂಚರಾಜ್ಯಗಳ ಮತ ಎಣಿಕೆಯ ಫಲಿತಾಂಶಗಳು ದೇಶದ ರಾಜಕೀಯದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿವೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಹೊಸ ರಾಜಕೀಯ ಸಮೀಕರಣಗಳು ಸ್ಪಷ್ಟವಾಗಿ ಹೊರಬಿದ್ದಿವೆ. ಒಟ್ಟು 824 ಸ್ಥಾನಗಳ ಭವಿಷ್ಯ ನಿರ್ಧಾರವಾದ ಈ ಚುನಾವಣೆಯಲ್ಲಿ ಹಲವು ವರ್ಷಗಳಿಂದ ಮುಂದುವರಿದಿದ್ದ ರಾಜಕೀಯ ಪ್ರಾಬಲ್ಯಗಳಿಗೆ ಮತದಾರರು ದೊಡ್ಡ ಸಂದೇಶ ನೀಡಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿ ಐತಿಹಾಸಿಕ ಜಯ
294 ಸ್ಥಾನಗಳ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನ ಅಗತ್ಯವಿದೆ.
ಫೈನಲ್ ಫಲಿತಾಂಶ:
ಬಿಜೆಪಿ: 205
ಟಿಎಂಸಿ: 86
ಇತರೆ: 3
15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಟಿಎಂಸಿ ಸರ್ಕಾರಕ್ಕೆ ಮತದಾರರು ಹಿನ್ನಡೆ ನೀಡಿದ್ದು, ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಾಧ್ಯತೆ ಸಾಧಿಸಿದೆ.
ತಮಿಳುನಾಡು: ವಿಜಯ್ ಅವರ TVK ಭರ್ಜರಿ ಪ್ರವೇಶ
234 ಸ್ಥಾನಗಳ ತಮಿಳುನಾಡಿನಲ್ಲಿ ಬಹುಮತಕ್ಕೆ 118 ಅಗತ್ಯ.
ಫೈನಲ್ ಫಲಿತಾಂಶ:
TVK (ವಿಜಯ್): 112
DMK: 78
AIADMK: 38
ಇತರೆ: 6
ನಟ ವಿಜಯ್ ಅವರ ರಾಜಕೀಯ ಪ್ರವೇಶ ರಾಜ್ಯದ ರಾಜಕೀಯ ಸಮೀಕರಣವನ್ನೇ ಬದಲಿಸಿದ್ದು, ಪಾರಂಪರಿಕ ಪಕ್ಷಗಳಿಗೆ ದೊಡ್ಡ ಸವಾಲು ಎಸೆದಿದೆ.
ಕೇರಳ: ಯುಡಿಎಫ್ ಪುನರಾಗಮನ
140 ಸ್ಥಾನಗಳ ಕೇರಳದಲ್ಲಿ ಬಹುಮತಕ್ಕೆ 71 ಅಗತ್ಯ.
ಫೈನಲ್ ಫಲಿತಾಂಶ:
UDF: 104
LDF: 33
BJP: 3
10 ವರ್ಷಗಳ ಬಳಿಕ ಯುಡಿಎಫ್ ಮತ್ತೆ ಅಧಿಕಾರಕ್ಕೆ ಮರಳಿದ್ದು, ಎಲ್‌ಡಿಎಫ್‌ಗೆ ಇದು ದೊಡ್ಡ ಹಿನ್ನಡೆಯಾಗಿದೆ. ಬಿಜೆಪಿ ಮೊದಲ ಬಾರಿಗೆ 3 ಸೀಟ್ ಜಯಿಸುವ ಮೂಲಕ ಉತ್ತಮ ಪ್ರಗತಿಯನ್ನು ತೋರಿದೆ.
ಅಸ್ಸಾಂ: NDA ಮತ್ತೆ ಅಧಿಕಾರದತ್ತ
126 ಸ್ಥಾನಗಳ ಅಸ್ಸಾಂನಲ್ಲಿ ಬಹುಮತಕ್ಕೆ 64 ಅಗತ್ಯ.
ಫೈನಲ್ ಫಲಿತಾಂಶ:
NDA (BJP+): 85
ಕಾಂಗ್ರೆಸ್: 26
ಇತರೆ: 15
ಹಿಮಂತ ಬಿಸ್ವ ಶರ್ಮಾ ನೇತೃತ್ವದ NDA ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆದು ಆಡಳಿತ ಮುಂದುವರಿಸಲು ಸಜ್ಜಾಗಿದೆ.
ಪುದುಚೇರಿ: NDAಗೆ ಮತ್ತೊಂದು ಅವಧಿ
30 ಸ್ಥಾನಗಳ ಪುದುಚೇರಿಯಲ್ಲಿ ಬಹುಮತಕ್ಕೆ 16 ಅಗತ್ಯ.
ಫೈನಲ್ ಫಲಿತಾಂಶ:
NDA (AINRC+BJP): 21
ಕಾಂಗ್ರೆಸ್: 7
ಇತರೆ: 2
NDA ಮೈತ್ರಿ ಮತ್ತೆ ಸರ್ಕಾರ ರಚಿಸಲು ಯಶಸ್ವಿಯಾಗಿದ್ದು, ಆಡಳಿತ ಮುಂದುವರಿಸುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕ ಬೈ-ಎಲೆಕ್ಷನ್ (2 seats)
ಕಾಂಗ್ರೆಸ್: 2
ಬಿಜೆಪಿ: 0
ಕರ್ನಾಟಕದಲ್ಲಿ ನಡೆದ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ರಾಜಕೀಯವಾಗಿ ಬಲ ನೀಡುವ ಸೂಚನೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಈ ಪಂಚರಾಜ್ಯಗಳ ಫಲಿತಾಂಶಗಳು ಕೇವಲ ಸರ್ಕಾರ ಬದಲಾವಣೆ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸುವ ಸಂದೇಶವೆಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶಗಳು 2029 ಲೋಕಸಭೆ ಚುನಾವಣೆಗೆ ದಿಕ್ಕು ತೋರಿಸುವ ಸೂಚನೆಗಳಾಗಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.





