ಮಂಗಳೂರು, April 07, 2025 : ಕೇಂದ್ರ ಸರಕಾರ "ರೋಸ್ಟಡ್ ನಟ್ಸ್ & ಸೀಡ್ಸ್" ಶಿರೋನಾಮೆಯ ಮೂಲಕ ಅಮದಾಗುತ್ತಿದ್ದ ಅಡಿಕೆಗೆ ನಿರ್ಬಂಧ ಹಾಕಿದೆ. ವಿದೇಶಿ ವ್ಯಾಪಾರ ನಿರ್ದೇಶಾಲಯ ಈ ಮಹತ್ತರ ಆದೇಶವನ್ನು ಹೊರಡಿಸಿದ್ದು, ಕೇಂದ್ರ ಸರಕಾರದ ಈ ಕ್ರಮವನ್ನು ಕ್ಯಾಂಪ್ಕೊ ಸಂಸ್ಥೆ ಕೂಡ ಸ್ವಾಗತಿಸಿದೆ ಎಂದು ತಿಳಿದುಬಂದಿದೆ.
ಕೆಲ ತಿಂಗಳುಗಳ ಹಿಂದೆ ಹುರಿದ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಗೆ ಹೊರ ದೇಶಗಳಿಂದ ಬಂದಿದ್ದರ ಪರಿಣಾಮ ಪೆಟೋರ ಮತ್ತು ಇತರ ಕೆಲ ದರ್ಜೆಯ ಅಡಿಕೆಯ ಬೇಡಿಕೆ ಕುಂಠಿತವಾಗಿತ್ತು ಮತ್ತು ಅದರ ಬೆಲೆ ಕೂಡಾ ಕಡಿಮೆಯಾಗಿತ್ತು.
ಎ. 2 ರಂದು ಕೇಂದ್ರ ವಾಣಿಜ್ಯ ಇಲಾಖೆಯು ಐಟಿಸಿ ಕೋಡ್ 08028090 ಮತ್ತು 20081920 ಅಡಿಯಲ್ಲಿ ಬರುವ ಹುರಿದ ಅಡಿಕೆಯನ್ನು ಉಚಿತದಿಂದ ನಿಷೇಧಿತ ಎಂದು ವರ್ಗೀಕರಿಸಿದೆ. ಕೇಂದ್ರ ಸರಕಾರದ ಈ ಕ್ರಮದಿಂದ ಅಡಿಕೆ ಬೆಳೆಗಾರರಿಗೆ ಸಂತಸ ತರಲಿದೆ.