ಆನ್‌ಲೈನ್ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ, 63 ಲಕ್ಷ ಗುಳುಂ - ಕೇಸು ದಾಖಲು

  • 07 Apr 2025 10:29:16 AM

Mangaluru, April 07, 2025 : ಆನ್‌ಲೈನ್ ಕ್ರಿಪ್ಟೋಕರೆನ್ಸಿ ಹೂಡಿಕೆ ಹಗರಣದಲ್ಲಿ ವ್ಯಕ್ತಿಯೊಬ್ಬರು 63 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. 2025 ರ ಜನವರಿಯಲ್ಲಿ ಫೇಸ್‌ಬುಕ್‌ನಲ್ಲಿ ತನ್ನನ್ನು ರಿಯಾಸೆನ್ ಎಂದು ಗುರುತಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ಸಂಪರ್ಕಿಸಿದ್ದ, ಆಮೇಲೆ ಪೀಟರ್ ಪಾಲ್ ಅವರನ್ನು ತನ್ನ ಮಾರ್ಗದರ್ಶಕ ಎಂದು ಪರಿಚಯಿಸಿ ಈ ರೀತಿಯ ನಾಟಕ ನಡೆಸಿದ್ದರಂತೆ.

 

BITFINEW.COM ಇನ್ವೆಸ್ಟ್‌ಮೆಂಟ್ ಟ್ರೇಡಿಂಗ್ ಎಂಬ ವೇದಿಕೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಮತ್ತು ಲಾಭದ ಮೇಲೆ 30% ಕಮಿಷನ್ ಕೊಡುವುದಾಗಿ ಭರವಸೆ ನೀಡಿದ್ದರಂತೆ. ಫೆಬ್ರವರಿ 2 ರಿಂದ 23 ರ ನಡುವೆ ಹೂಡಿಕೆ ಮಾಡಲು ಪ್ರಾರಂಭಿಸಿದ ದೂರುದಾರ ಬ್ಯಾಂಕ್ ಮತ್ತು ಹಣ ವಿನಿಮಯ ಸೇವೆಗಳ ಮೂಲಕ ಒಟ್ಟು 63 ಲಕ್ಷ ರೂ.ಗಳನ್ನು ಹಣವನ್ನು ವರ್ಗಾಯಿಸಿದ್ದರು.

 

ಹೂಡಿಕೆ ಮಾಡಿದ ಹಣವು ಇಲ್ಲ, ಹೆಚ್ಚಿನ ಆದಾಯವು ಇಲ್ಲ ಮತ್ತು 30% ಕಮಿಷನ್ ಸಿಗಲಿಲ್ಲ ಎಂದು ದೂರುದಾರ ತಲೆಗೆ ಕೈ ಇತ್ತು ಈಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

 

ಆನ್ಲೈನ್ ಫ್ರಾಡ್‌ಗಳನ್ನು ತಡೆಗಟ್ಟಲು ಎಚ್ಚರಿಕೆಯಾಗಿರಿ. ಯಾವುದೇ ಅನಿಸಿಕೆ ಇಲ್ಲದ ಲಿಂಕ್ಸ್ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅನ್ಯರಿಗೆ ಹಂಚಬೇಡಿ. ಸುರಕ್ಷಿತ ಮತ್ತು ಖಾತ್ರಿ ಮಾಡಿರುವ ವೆಬ್‌ಸೈಟ್‌ಗಳ ಮೂಲಕ ಮಾತ್ರ ಆನ್‌ಲೈನ್ ವ್ಯವಹಾರಗಳನ್ನು ಮಾಡಿ