ಹೊಸ ಮನೆ ಕಟ್ಟುವವರಿಗೆ ತಟ್ಟಲಿದೆ ಬೆಲೆ ಏರಿಕೆಯ ಬಿಸಿ : ಸಿಮೆಂಟ್, ಕಬ್ಬಿಣ ಸಾಗಾಣಿಕ ವೆಚ್ಚ ಏರಿಕೆಯಾಗಲಿದೆ

  • 07 Apr 2025 02:39:33 PM

Mangaluru, April 07, 2025: ಹೊಸ ಮನೆ ಕಟ್ಟುವವರಿಗೆ ಅಥವಾ ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಡೀಸೆಲ್ ಮತ್ತು ಟೋಲ್ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 

 

ರಾಜ್ಯ ಸರಕಾರದ ಡೀಸೆಲ್ ಮೇಲೆ ರೂ. 2 ಏರಿಕೆ ಮತ್ತು ಕೇಂದ್ರ ಸರಕಾರದ 3-5% ಟೋಲ್ ಬೆಲೆ ಏರಿಕೆ ರಾಜ್ಯದ ಸಾಗಾಣಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಲಿದೆ. 

 

ಇದರಿಂದಾಗಿ, ಮನೆ ಕಟ್ಟಲು ಬೇಕಾದ ಸಾಮಗ್ರಿಗಳಾದ ಸಿಮೆಂಟ್, ಮರಳು, ಜಲ್ಲಿ, ಕಬ್ಬಿಣ ಹಾಗೂ ಇನ್ನಿತರ ವಸ್ತುಗಳ ಬೆಲೆ ಶೇ. 15 ರಿಂದ ಶೇ. 20 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಹೊಸ ಮನೆ ಕಟ್ಟುವವರು ಅಥವಾ ಈಗಾಗಲೇ ಮನೆ ಕಟ್ಟುತ್ತಿರುವವರು ಬೆಲೆ ಏರಿಕೆಯ ಬಿಸಿ ಅನುಭವಿಸಲಿದ್ದಾರೆ. 

 

ಈಗಾಗಲೇ ದಿನಚರಿ ವಸ್ತುಗಳಲ್ಲಿ ಏರಿಕೆಯಾಗಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಇತೀಚಿಗೆ ಹಾಲು ಮತ್ತು ಮೊಸರಿನ ಮೇಲೆ 4 ರೂ.  ಏರಿಕೆ ಆದ ಪರಿಣಾಮ ಹಾಲಿನ ಉತ್ಪನ್ನಗಳ ಬೆಲೆ ಜಾಸ್ತಿಯಾಗಿದೆ. 

 

ಚಾ ಮತ್ತು ಕಾಫಿ ಬೆಲೆಯೂ ಏರಿಕೆಯಾದ್ದರಿಂದ ಚಾ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಬೆಲೆ ಏರಿಕೆ ಬಡವರನ್ನು ಇನ್ನಷ್ಟು ಬಡತನಕ್ಕೆ ದೂಡುವುದು ಅಲ್ಲದೆ,  ಮಧ್ಯಮ ವರ್ಗದವರಿಗೂ ಜೀವನ ನಡೆಸಲು ಕೂಡ ಕಷ್ಟವಾಗಲಿದೆ