ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ ಹಿಂದೂ ದೇವಾಲಯದಲ್ಲಿ ಹಿಂದೂ ಭಕ್ತರು ರಾಮನವಮಿ ಮತ್ತು ಸ್ವಾಮಿ ನಾರಾಯಣ ಜಯಂತಿಯನ್ನು ಆಚರಿಸಿದರು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಎಲ್ಲಾ ಇತರ ಎಮಿರೇಟ್ಸ್ ಗಳಿಂದ ದೇವಸ್ಥಾನಕ್ಕೆ ಹಿಂದೂ ಭಕ್ತರು ಭೇಟಿ ಕೊಟ್ಟು ಬಹಳ ಅಪಾರ ಭಕ್ತಿ ಮತ್ತು ಭವ್ಯತೆಯಿಂದ ಆಚರಣೆ ಮಾಡಲಾಯಿತು.
ಎಲ್ಲರ ಪ್ರದೇಶದ ಭಕ್ತರು, ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಸಲುವಾಗಿ ದೇವಸ್ಥಾನದಲ್ಲಿ ಒಗ್ಗೂಡಿದರೆಂದು NDTV World ನ್ಯೂಸ್ ನಲ್ಲಿ ಪ್ರಕಟಣೆಯಾಗಿದೆ. ಇದು ಸಾಂಸ್ಕೃತಿಕ ಮತ್ತು ಆದ್ಯಾತ್ಮಿಕ ಸಾಮರಸ್ಯಕ್ಕೆ ಹೆಗ್ಗುರುತಾಗಿದೆ.
ಹಿಂದೂಗಳ ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವನ್ನು ಹೋಲುವಂತೆ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿತ್ತು. BAPS ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಗೀತ, ನಾಟಕ ಮತ್ತು ಕಥೆ ಹೇಳುವ ಮೂಲಕ ಶ್ರೀರಾಮನ ದೈವಿಕ, ಸ್ಫೂರ್ತಿದಾಯಕ ಜೀವನವನ್ನು ಯುವಕಲಾವಿದರು ಪ್ರೇಕ್ಷಕರಿಗೆ ಪ್ರದರ್ಶನದ ಮೂಲಕ ವ್ಯಕ್ತಪಡಿಸಿದರು.