April 07, 2025 : ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಸೌದಿ ಅರೇಬಿಯಾ ದೇಶ ಕೆಲ ದೇಶಗಳಿಗೆ ವೀಸಾ ನೀಡುವುದನ್ನು ರದ್ದು ಮಾಡಿದೆ. ದೇಶಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇನ್ನಿತರ ಕೆಲ ದೇಶಗಳು ಈ ಲಿಸ್ಟ್ ನಲ್ಲಿದೆ ಎಂದು ವರದಿಯಾಗಿದ್ದು, ಭಾರತದಿಂದ ಹೋಗುವ ಸೌದಿ ಅರೇಬಿಯಾದ ಪವಿತ್ರ ಸ್ಥಳಗಳ ಯಾತ್ರಿಕರು ನಿರಾಶದಾಯಕರಾಗಿದ್ದಾರೆ.
ಈ ವರ್ಷದ ಹಜ್ ಯಾತ್ರೆಗೆ ಮುಂಚಿತವಾಗಿ, ಸೌದಿ ಅರೇಬಿಯಾ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ಪವಿತ್ರ ಕ್ಷೇತ್ರಕ್ಕೆ ಹಜ್ ಯಾತ್ರೆಯ ಮೂಲಕ ಭಾರತದಿಂದ ಸಾವಿರಾರು ಮಂದಿ ಮುಸಲ್ಮಾನರು ಪ್ರಯಾಣಿಸುತ್ತಾರೆ, ಇದರ ಜೊತೆಗೆ ಹಲವಾರು ಕುಟುಂಬದ ಸದಸ್ಯರುಗಳನ್ನು ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕರೆಸಿಕೊಳ್ಳುತ್ತಾರೆ.
ಪವಿತ್ರ ಕ್ಷೇತ್ರಕ್ಕೆ ಭೇಟಿ ಕೊಡುವ ಭಾರತೀಯರು ಗೊಂದಲಕ್ಕೆ ಬೀಳುವುದು ಅಲ್ಲದೆ, ವ್ಯಾಪಾರ ವಹಿವಾಟು ಮಾಡುವ ಪ್ರಯಾಣಿಕರಿಗೂ ಈ ಕಾನೂನು ತಲೆಬಿಸಿ ತರಲಿದೆ.
ಯುಎಇ ದೇಶದ ಪತ್ರಿಕೆ ಗಲ್ಫ್ ನ್ಯೂಸ್ ನಲ್ಲಿ ಪ್ರಕಟವಾದ ಪ್ರಕಾರ ಇ ಎಲ್ಲಾ ದೇಶಗಳಿಗೆ ಬ್ಯಾನ್ ವಿಧಿಸಲಾಗಿದೆ.
ಭಾರತ
ಪಾಕಿಸ್ತಾನ
ಬಾಂಗ್ಲಾದೇಶ
ಈಜಿಪ್ಟ್
ಇಂಡೋನೇಷ್ಯಾ
ಇರಾಕ್
ನೈಜೀರಿಯಾ
ಜೋರ್ಡಾನ್
ಅಲ್ಜೀರಿಯಾ
ಸುಡಾನ್
ಇಥಿಯೋಪಿಯಾ
ಟುನೀಶಿಯಾ
ಯೆಮನ್