ಟ್ರಕ್ ಚಾಲಕನ ಮಗಳು ಕರ್ನಾಟಕದ 12ನೇ ತರಗತಿಯ ಕಲಾ ವಿಭಾಗದಲ್ಲಿ ಮೊದಲ ರ್‍ಯಾಂಕ್

  • 08 Apr 2025 10:02:03 PM

Karnataka 2nd PUC Restult : ಬಳ್ಳಾರಿ ಜಿಲ್ಲೆಯ ಪಿಯು ಕಾಲೇಜು ದ್ವೀತಿಯ PUC ಕಲಾ ವಿಭಾಗದ ವಿದ್ಯಾರ್ಥಿನಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

 

ಕಲಾ ವಿಬಾಗದಲ್ಲಿ ಮೊದಲ ರ್‍ಯಾಂಕ್ ಪಡೆದ ಸಂಜನಾ ಬಾಯಿ 600 ಕ್ಕೆ ‌597 ಅಂಕ ಗಳಿಸಿ ಪೋಷಕರ, ಶಾಲೆಯ ಮತ್ತು ಇಡೀ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿದ್ದಾಳೆ.

 

ಮೂಲಗಳ ಪ್ರಕಾರ, ಸಂಜನಾ ಬಾಯಿ ಅವರ ತಂದೆ ಟ್ರಕ್ ಡ್ರೈವರ್ ಆಗಿದ್ದು, ಮಗಳನ್ನು ಕಷ್ಟ ಪಟ್ಟು ಓದಿಸಿದ್ದಾರಂತೆ. ತನ್ನ ಮಗಳು ರಾಜ್ಯಕ್ಕೆ ಪ್ರಥಮ ಬಂದ ಖುಷಿ ಪೋಷಕರನ್ನು ಸಂತಸದ ಅಲೆಯಲ್ಲಿ ತೇಲಿಸಿದೆ.

 

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಕರಾವಳಿ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯ 2024-25 ನೇ ಸಾಲಿನ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಪ್ರಕಟಿಸಿದರು.

 

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ  73.45 ರಷ್ಟು ಫಲಿತಾಂಶ ಪ್ರಕಟವಾಗಿದೆ.

 

ಉಡುಪಿ ಜಿಲ್ಲೆ ಪ್ರಥಮ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ. ಉಡುಪಿ ಶೇ. 93.90 ಮತ್ತು ದಕ್ಷಿಣ ಕನ್ನಡ ಶೇ. 93.57% ಪಡೆದಿದೆ.