ದೆಹಲಿ, 09, ಏಪ್ರಿಲ್ : ಭಾರತದ ನೌಕಾಪಡೆಗೆ ಬರಲಿದೆ ಹೊಸ ಫೈಟರ್ ಜೆಟ್ ವಿಮಾನ. ಭಾರತದ ಅತಿ ದೊಡ್ಡ ಫೈಟರ್ ಒಪ್ಪಂದಕ್ಕೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಭವದನೆ ನೀಡಿದೆ.
ಭಾರತದ ನೌಕಾಪಡೆಗೆ 26 ರಫೆಲ್ ಯುದ್ಧ ವಿಮಾನಗಳನ್ನು ಕರೆದಿಸಲು ಅನುಮೋದನೆ ನೀಡಿ ಸರಕಾರದ ಸಂಪುಟ ಸಮಿತಿ, ಸುಮಾರು 63,000 ಕೋಟಿ ರೂಪಾಯಿಗಳ ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದ ನೌಕಾಪಡೆಯನ್ನು ಭದ್ರತೆ ಪಡಿಸುವ ಉದ್ದೇಶ ಇಟ್ಟುಕೊಂಡಿದೆ.
ಫ್ರಾನ್ಸ್ ದೇಶದ ಜೊತೆ ಈ ಒಪ್ಪಂದ ನಡೆಯಲಿದೆ. ಒಪ್ಪಂದವು 22 ಸಿಂಗಲ್ ಸೀಟರ್ ಮತ್ತು ನಾಲ್ಕು ಟ್ವನ್ ಸೀಟರ್ ರಫೆಲ್ ಫೈಟರ್ ಜೆಟ್ ಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಒಪ್ಪಂದ ಸಹಿ ಹಾಕಿದ ನಂತರ ಸುಮಾರು ಐದು ವರ್ಷಗಳ ನಂತರ ಪ್ರಾರಂಭವಾಗುವ ನೀರಿಕ್ಷೆ ಇದೆ. ಈ ವಿಮಾನವು ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ವಿಮಾನ ವಾಹನ ನೌಕೆ ಐಎನ್ಎಸ್ ವಿಕ್ರಾಂತಿನಲ್ಲಿ ನಿಯೋಜಿಸಲಾಗುವುದು ಮತ್ತು ಪ್ರಸ್ತುತ ಮಿಗ್ 29ಕ್ಕೆ ನೌಕಾಪಡೆಯೊಂದಿಗೆ ಜೊತೆಗೆ ಕಾರ್ಯನಿರ್ವಹಿಸಲಿದೆ.
ಈ ತಿಂಗಳ ಕೊನೆಯಲ್ಲಿ ಫ್ರೆಂಚ್ ರಕ್ಷಣಾ ಸಚಿವರ ಭಾರತ ಭೇಟಿಯ ಸಮಯದಲ್ಲಿ ಈ ಒಪ್ಪಂದಕ್ಕೆ ಸಹಿಹಾಕುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಒಪ್ಪಂದ ಸಹಿ ಹಾಕಿದ ನಂತರ ಸರಿಸುಮಾರು 5 ವರ್ಷಗಳ ನಂತರ ವಿತರಣೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ.