04 July 2026 |

ಭವ್ಯ ಜೀರ್ಣೋದ್ಧಾರದತ್ತ ಮೊಗರ್ನಾಡು ಸಾವಿರ ಸೀಮೆಯ ಕಡೇಶಿವಾಲಯ ಶ್ರೀ ಲಕ್ಷೀ ನರಸಿಂಹ ಸ್ವಾಮಿ ದೇವಸ್ಥಾನ : ಜು. 5ರಂದು ಶಿಲಾನ್ಯಾಸ

  • 03 Jul 2026 01:57:15 PM

ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಮೊಗರ್ನಾಡು ಸಾವಿರ ಸೀಮೆಯ ಮಹಾತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಭವ್ಯ ಜೀರ್ಣೋದ್ಧಾರ ಕಾರ್ಯಕ್ಕೆ ಮಹತ್ವದ ಚಾಲನೆ ದೊರೆಯಲಿದ್ದು, ಇದೇ ಜುಲೈ 5ರಂದು (ಭಾನುವಾರ) ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

 

ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಮಠಾಧೀಶರು, ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.