ಮಲಪ್ಪುರಂ, ಏಪ್ರಿಲ್ 09 : ಪ್ರೀತಿಯೊಂದಿಗೆ ಸಾಕಿದ, ಸಲಹೆ ನೀಡಿದ, ಪೋಷಿಸಿದ ಮಗಳು ಒಂದು ದಿನ ಹೆಣವಾಗಿ ಸಿಗುತ್ತಾಳೆ ಎಂದರೆ ಆ ಪೋಷಕರ ಸ್ಥಿತಿ ಹೇಗಿರುತ್ತೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಅದೇ ಮಗಳು ಅತ್ಯಾಚಾರಗೊಳ್ಳುವ ಮೂಲಕ ದೇಹ ಛಿದ್ರವಾದ ಸ್ಥಿತಿಯಲ್ಲಿ ಹೆಣವಾಗಿ ಬಿದಿರುವುದನ್ನು ಕಂಡ ಆ ಹೃದಯಕ್ಕೆ ಏನಾಗಿರಬಹುದು, ನೀವೇ ಊಹಿಸಿಕೊಳ್ಳಿ.
ಹೌದು, ಶಂಕರನಾರಾಯಣ್ ಅವರ ಸ್ಥಿತಿಯು ಇದೆ ಆಗಿತ್ತು. ಒಂದು ರೀತಿಯಲ್ಲಿ ನೋಡುವುದಾದರೆ ಕರ್ನಾಟಕದ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಪ್ರಕರಣಕ್ಕೆ ಹೋಲುವ ರೀತಿಯಲ್ಲೇ ಈ ಘಟನೆಯು ನಡೆದಿದೆ. ಆದರೆ ಈ ಪ್ರಕರಣದಲ್ಲಿ ಕೊಂದ ವ್ಯಕ್ತಿ ಸಿಕ್ಕಿದ್ದಾನೆ ಮತ್ತು ಆ ವ್ಯಕ್ತಿಗೆ ಅತ್ಯಾಚಾರಕ್ಕೆ ಒಳಗಾದ ಮಗಳ ತಂದೆಯೇ ಶಿಕ್ಷೆಯನ್ನು ಘೋಷಿಸಿದ್ದರು. ಹಾಗಾದರೆ ಏನಿದು ಪ್ರಕರಣ ಬನ್ನಿ ನೋಡೋಣ.
ಕೇರಳದ ಮಲಪ್ಪುರಂನ ಮಂಜೇರಿಯ ಎಳಂಗೂರ್ ನಲ್ಲಿ ನಡೆದ ಘಟನೆ. 7ನೇ ತರಗತಿಯಲ್ಲಿ ಕಳೆಯುತ್ತಿದ್ದ ಕೃಷ್ಣಪ್ರಿಯಾ, ಶಂಕರನಾರಾಯಣ್ ಅವರ 13ನೇ ವರ್ಷ ಪ್ರಾಯದ ಮಗಳು ಎಂದಿನಂತೆ ಶಾಲೆಗೆ ಹೊರಟಿದ್ದಳು. ಶಾಲೆಯಿಂದ ಮರಳಿ ಬರುವ ಸಂದರ್ಭದಲ್ಲಿ 24 ವರ್ಷ ಪ್ರಾಯದ ಅಹ್ಮದ್ ಕೋಯಾ ಎನ್ನುವವ ಆಕೆಯನ್ನು ಹಿಡಿದು ಅತ್ಯಾಚಾರವೆಸಗಿದ್ದ. ಪೋಷಕರು ಮಗಳು ಏನು ಇನ್ನು ಮನೆಗೆ ಬರಲಿಲ್ಲ ಎಂದು ಹುಡುಕಾಡಿದಾಗ, ಛಿದ್ರವಾದ ಬಿದ್ದಿದ ದೇಹ ಪಕ್ಕದಲ್ಲಿ ನಿರ್ಮಾಣದ ಹಂತದಲ್ಲಿದ್ದ ಒಂದು ಮನೆಯಲ್ಲಿ ಬಿದ್ದಿತ್ತು. ಇದೆಲ್ಲಾ ನಡೆದದ್ದು ಫೆ . 9, 2021ನೇ ತಾರೀಕಿನಂದು. ಆರೋಪಿಗೆ ಯಾವುದೇ ಸಾಕ್ಷಿ ನಾಶ ಮಾಡಲು ಅವಕಾಶ ಇಲ್ಲದೆ ಇದ್ದುದರಿಂದ, ಪೊಲೀಸರು ತಕ್ಷಣ ಅವನನ್ನು ಹಿಡಿದು ಜೈಲಿಗೆಟ್ಟಿದ್ದರು.
ಆದರೆ ಆರೋಪಿ ಮಾತ್ರ ಒಂದು ವರ್ಷ ಕಳೆದ ಕೂಡಲೇ ಜಾಮೀನು ಪಡೆದುಕೊಂಡು ಹೊರಗಡೆ ಬಂದಿದ್ದ. ಈಗ ನೋಡಿ ಶಂಕರನಾರಾಯಣ ಅವರಿಗೆ ತಡೆಯಲಾಗದ ಸಿಟ್ಟು ಬಂದಿದ್ದು. ನ್ಯಾಯಾಂಗ ವ್ಯವಸ್ಥೆಯ ಮೇಲೆ ಕೋಪಗೊಂಡಿದ್ದ ಇವರು, ಯಾವಾಗ ಕಾನೂನು ರೀತಿಯಲ್ಲಿ ತನ್ನ ಮಗಳಿಗೆ ನ್ಯಾಯ ದೊರಕಿಲ್ಲವೋ ಅವತ್ತೇ ಕಾನೂನನ್ನು ಕೈಗೆತ್ತುಕೊಳ್ಳುವ ನಿರ್ಧಾರಕ್ಕೆ ಬಂದರು. ಇನ್ನಿಬ್ಬರ ಸಹಾಯದಿಂದ ಅಹ್ಮದ್ ಕೋಯಾನನ್ನು ಗುಂಡಿಕ್ಕಿ ಕೊಂದೇ ಬಿಟ್ಟರು.
ಶಂಕರನಾರಾಯಣರವರು ಹೈನುಗಾರಿಕೆ ಕೆಲಸ ಮಾಡುತ್ತಾ ಬಹಳ ನೆಮ್ಮದಿಯ ಜೀವನ ನಡೆಸುತ್ತಿದ್ದರು. ತನ್ನ ಮಗಳ ಜೊತೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಆಕೆಯನ್ನು ಕಳೆದುಕೊಂಡ ನಂತರ ದಿನಾಲೂ ಕುಟುಂಬಸ್ಥರಲ್ಲಿ, ನೆರೆಕರೆಯ ಜನರಲ್ಲಿ ಮತ್ತು ಮಿತ್ರರ ಜೊತೆ ಯಾವಾಗಲು ಮಗಳ ಬಗ್ಗೆಯೇ ಮಾತನಾಡುತಿದ್ದರು. ಬಹಳ ಕೊರಗುತ್ತಿದ್ದ ಅವರು ಮಗಳನ್ನು ಕಳೆದುಕೊಂಡ ದಿನದ ನಂತರ ನಾನು ಯಾವತ್ತೂ ಸರಿಯಾಗಿ ನಿದ್ದೆ ಮಾಡಿಲ್ಲ ಎಂಬ ಬೇಸರವನ್ನು ಮಾಧ್ಯಮಗಳ ಸಂದರ್ಶನಲ್ಲಿ ಹೇಳಿದ್ದರು.
ಅಹ್ಮದ್ ಕೋಯಾ ಮುಗಿಸಿದ ನಂತರ ಶಂಕರನಾರಾಯಣ್ ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋಗಿ ಅವರೇ ಶರಣಾಗತಿಯಾಗಿದ್ದರು. ಜೊತೆಗೆ ಬಳಸಿದ ಆಯುಧವನ್ನು ಕೂಡ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅಷ್ಟರಲ್ಲೇ ಇವರು ಕೇರಳದಲ್ಲಿ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಹಳಷ್ಟು ಚರ್ಚೆಗಳು, ಹಾಡಿ ಹೊಗಳುವ ಮಾತುಗಳು ಇತ್ಯಾದಿಗಳು ನಡೆದವು.
ಕೊನೆಗೆ ಇವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಜನಾಭಿಪ್ರಾಯ ಶಂಕರನಾರಾಯಣ್ ಪರವಾಗಿ ಇದ್ದುದ್ದರಿಂದ, ಇವರನ್ನು ಕೇರಳ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿತ್ತು. ಅಹ್ಮದ್ ಕೋಯಾನ ಹಿನ್ನಲೆ ಸರಿ ಇರಲಿಲ್ಲ, ಆತ ಕ್ರಿಮಿನಲ್ ಹಿನ್ನಲೆ ಇದ್ದವ, ಬಹಳಷ್ಟು ಶತ್ರುಗಳಿದ್ದರು ಅದೇ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳುವ ಮೂಲಕ ಈತನನ್ನು ಕೊಂದಿರಬಹುದು ಎನ್ನುವ ಹೇಳಿಕೆ ನೀಡಿ ಶಂಕರನಾರಾಯಣ್ ಬಿಡುಗಡೆಗೊಳಿಸಿದರು.
ಈ ಕೋರ್ಟಿನ ತೀರ್ಪು ದೇಶದಾದ್ಯಂತ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಶಂಕರನಾರಾಯಣರವರು ಏಪ್ರಿಲ್ 09, 2025 ರಂದು ತನ್ನ 75ನೇ ವಯಸಿನಲ್ಲಿ ಮರಣಹೊಂದಿದ್ದರೆ. ಪೊಲೀಸ್, ನ್ಯಾಯಾಂಗ ಅಥವಾ ಯಾವುದೇ ವ್ಯವಸ್ಥೆ ಸರಿಯಾಗಿ ಅಮಾಯಕರಿಗೆ ನ್ಯಾಯ ಕೊಡದೆ ಹೋದರೆ ಶಂಕರನಾರಾಯಣ್ ರಂತಹ ತಂದೆಗಳು ಜಗತ್ತಿಗೆ ಮಾದರಿಯಾಗುತ್ತಾರೆ.