21 September 2026 |

30 ವರ್ಷಗಳ ಹಿಂದಿನ ಉಡುಗೊರೆಯನ್ನು ಜೋಪಾನವಾಗಿಟ್ಟ ಪ್ರಧಾನಿ ಮೋದಿ; ನ್ಯೂಜಿಲೆಂಡ್‌ನಲ್ಲಿ ಹಂಚಿಕೊಂಡ ನೆನಪು

  • 11 Jul 2026 07:46:02 PM

ನ್ಯೂಜಿಲ್ಯಾಂಡ್: "ಸರ್ಕಾರದಲ್ಲಿ ಯಾವುದೇ ಹುದ್ದೆಯಲ್ಲಿರದಾಗ ಸಿಕ್ಕ ಉಡುಗೊರೆಯನ್ನು ಇಂದಿಗೂ ಜೋಪಾನವಾಗಿ ಇಟ್ಟಿದ್ದೇನೆ" ಎಂದು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳುತ್ತಾ ಆ ಹಳೆಯ ನೆನಪನ್ನು ಸ್ಮರಿಸಿದರು.

 

ನ್ಯೂಜಿಲೆಂಡ್‌ನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸುಮಾರು 30 ವರ್ಷಗಳ ಹಿಂದಿನ ತಮ್ಮ ಮೊದಲ ನ್ಯೂಜಿಲೆಂಡ್‌ ಭೇಟಿಯನ್ನು ನೆನಪಿಸಿಕೊಂಡರು.

 

ಆಗ ತಮಗೆ ಅಲ್ಲಿನ ಒಬ್ಬ ಸಹೋದ್ಯೋಗಿ ಮಫ್ಲರ್(ಕುತ್ತಿಗೆಬಟ್ಟೆ), ಟೋಪಿ ಹಾಗೂ ಕೈಗವಸುಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದರು. ಮೂರು ದಶಕಗಳ ಬಳಿಕ ಪ್ರಧಾನಮಂತ್ರಿಯಾಗಿ ಮತ್ತೆ ನ್ಯೂಜಿಲೆಂಡ್‌ಗೆ ಬಂದಾಗ, ಅದೇ ಮಫ್ಲರ್ ಧರಿಸಿಕೊಂಡು ಬಂದಿರುವುದಾಗಿ ಮೋದಿ ತಿಳಿಸಿದರು.

 

"ಆ ಉಡುಗೊರೆಯನ್ನು ನಾನು ಇಂದಿಗೂ ಜೋಪಾನವಾಗಿ ಉಳಿಸಿಕೊಂಡಿದ್ದೇನೆ" ಎಂದು ಅವರು ಹೇಳಿದ್ದು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

 

ಈ ಘಟನೆ ಭಾರತ–ನ್ಯೂಜಿಲೆಂಡ್‌ ಸ್ನೇಹ ಸಂಬಂಧಗಳ ಜೊತೆಗೆ ವೈಯಕ್ತಿಕ ನೆನಪುಗಳ ಮಹತ್ವವನ್ನೂ ಪ್ರತಿಬಿಂಬಿಸುವ ಕ್ಷಣವಾಗಿ ಗಮನ ಸೆಳೆಯಿತು.