ಮಂಗಳೂರು: ದೇಶದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ 1.75 ಮಿಲಿಯನ್ ಮೆಟ್ರಿಕ್ ಟನ್ (MMT) ಸಾಮರ್ಥ್ಯದ ಹೊಸ ಕಾರ್ಯತಂತ್ರದ ಕಚ್ಚಾ ತೈಲ ಸಂಗ್ರಹಣಾ (Strategic Petroleum Reserve - SPR) ಯೋಜನೆ ಅಭಿವೃದ್ಧಿಪಡಿಸಲು ಒಎನ್‌ಜಿಸಿ (ONGC) ತಾತ್ವಿಕ ಅನುಮೋದನೆ ನೀಡಿದೆ.
ಮಂಗಳೂರಿನ ಈಗಿನ ತೈಲ ಮೂಲಸೌಕರ್ಯ, ಬಂದರು ಹಾಗೂ ರಿಫೈನರಿ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗೆ ಮಹತ್ವ ನೀಡಲಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಸಂದರ್ಭಗಳಲ್ಲಿಯೂ ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಈ ಸಂಗ್ರಹಣಾ ಕೇಂದ್ರ ನೆರವಾಗಲಿದೆ.
ಈ ಯೋಜನೆ ಜಾರಿಯಾದರೆ ಮಂಗಳೂರು ದೇಶದ ಕಾರ್ಯತಂತ್ರದ ಇಂಧನ ಸಂಗ್ರಹಣೆಯಲ್ಲಿ ಇನ್ನಷ್ಟು ಪ್ರಮುಖ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಯಿದೆ.
ಇದರಿಂದ ಪ್ರದೇಶದ ಕೈಗಾರಿಕಾ ಅಭಿವೃದ್ಧಿ, ಉದ್ಯೋಗಾವಕಾಶಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೂ ಉತ್ತೇಜನ ದೊರೆಯುವ ನಿರೀಕ್ಷೆ ಇದೆ.
ದೇಶದ ಇಂಧನ ಭದ್ರತೆಯನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿ ಈ ಯೋಜನೆಯನ್ನು ಪರಿಗಣಿಸಲಾಗುತ್ತಿದೆ.





