15 July 2026 |

ಜುಲೈ 17ರಂದು ಪ್ರಧಾನಿ ಮೋದಿ ಅವರಿಂದ ಬಂಟ್ವಾಳ ರೈಲು ನಿಲ್ದಾಣ ಲೋಕಾರ್ಪಣೆ

  • 13 Jul 2026 07:45:09 PM

ಬಂಟ್ವಾಳ: ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಗೊಂಡಿರುವ ಬಂಟ್ವಾಳ ರೈಲು ನಿಲ್ದಾಣ ಜುಲೈ 17ರಂದು ಅಧಿಕೃತವಾಗಿ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

 

ಸುಮಾರು ₹26.18 ಕೋಟಿ ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ಮೂಲಸೌಕರ್ಯಗಳನ್ನು ನವೀಕರಿಸಲಾಗಿದೆ. 2024ರಲ್ಲಿ ಇದೇ ಯೋಜನೆಗೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು.

 

ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಭಾಗವಾಗಿ ದೇಶದ ವಿವಿಧ ಭಾಗಗಳ 75 ರೈಲು ನಿಲ್ದಾಣಗಳನ್ನು ಜುಲೈ 17ರಂದು ಪ್ರಧಾನಿ ಮೋದಿ ಒಂದೇ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದು, ಬಂಟ್ವಾಳ ರೈಲು ನಿಲ್ದಾಣವೂ ಆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಯೋಜನೆಯ ಉದ್ದೇಶ ಪ್ರಯಾಣಿಕರಿಗೆ ಆಧುನಿಕ, ಸುರಕ್ಷಿತ ಮತ್ತು ಸುಸಜ್ಜಿತ ರೈಲು ನಿಲ್ದಾಣಗಳನ್ನು ಒದಗಿಸುವುದಾಗಿದೆ.